ನವದೆಹಲಿ: ಅಡುಗೆ ಅನಿಲ (ಎಲ್ಪಿಜಿ) ದರವನ್ನು ಪ್ರತಿ ಸಿಲಿಂಡರ್ಗೆ ₹ 50ರಷ್ಟು ಹೆಚ್ಚಿಸಲಾಗಿದೆ. ಈ ತಿಂಗಳಿನಲ್ಲಿ ಎರಡನೇ ಬಾರಿ ಆಗಿರುವ ದರ ಏರಿಕೆ ಇದು.
ಇದರಿಂದ14.2ಕೆ.ಜಿ ಸಿಲಿಂಡರ್ನ ದರ ₹ 644 ಇದ್ದಿದ್ದು ₹ 694ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಡಿಸೆಂಬರ್ 1ರಂದು ಪ್ರತಿ ಸಿಲಿಂಡರ್ ದರ ₹ 50ರಷ್ಟು ಹೆಚ್ಚಿಳ ಆಗಿತ್ತು. 5 ಕೆ.ಜಿ.ಯ ಪ್ರತಿ ಸಿಲಿಂಡರ್ ದರ ₹18 ಹಾಗೂ 19 ಕೆ.ಜಿ ಸಿಲಿಂಡರ್ ದರ ₹ 36.50ರಷ್ಟು ಹೆಚ್ಚಾಗಿದೆ.
ವಿಮಾನ ಇಂಧನ (ಜೆಟ್ ಇಂಧನ) ದರ ಶೇ 6.3ರಷ್ಟು ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಪ್ರತಿ ಕಿಲೊ ಲೀಟರಿಗೆ ₹ 49,161ಕ್ಕೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.