
ಪ್ರಜಾವಾಣಿ ವಾರ್ತೆ
ಬೆಂಗಳೂರು: ಲಾರ್ಸನ್ ಆ್ಯಂಡ್ ಟೂಬ್ರೊ ಕಂಪನಿಯು ತನ್ನ ದತ್ತಾಂಶ ಕೇಂದ್ರ ವಹಿವಾಟಿನ ಹೆಸರನ್ನು ‘ಲಾರ್ಸನ್ ಆ್ಯಂಡ್ ಟೂಬ್ರೊ ವ್ಯೋಮ’ ಎಂದು ಬದಲಾಯಿಸಿದೆ.
ಈ ಮೊದಲು ಈ ವಹಿವಾಟಿನ ಹೆಸರು ‘ಎಲ್‌ಆ್ಯಂಡ್‌ಟಿ–ಕ್ಲೌಡ್‌ಫಿನಿಟಿ’ ಎಂದಾಗಿತ್ತು. ಸಂಸ್ಕೃತದ ‘ವ್ಯೋಮ’ ಹೆಸರಿನಿಂದ ಸ್ಫೂರ್ತಿ ಪಡೆದು ಈ ಹೊಸ ಹೆಸರು ಇಡಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
‘ಭಾರತದ ದತ್ತಾಂಶ ಕೇಂದ್ರ ಮಾರುಕಟ್ಟೆಯ ಗಾತ್ರವು ಮುಂದಿನ ಕೆಲವು ವರ್ಷಗಳಲ್ಲಿ ಭಾರಿ ಪ್ರಮಾಣದ ಬೆಳವಣಿಗೆ ಕಾಣುವ ಅಂದಾಜಿದೆ. ದೇಶದ ಡಿಜಿಟಲ್ ಮಹತ್ವಾಕಾಂಕ್ಷೆಯನ್ನು ಬೆಂಬಲಿಸುವ ವಿಶ್ವಾಸಾರ್ಹ ವ್ಯವಸ್ಥೆಯನ್ನು ಕಟ್ಟುವ ನಮ್ಮ ದೂರದೃಷ್ಟಿಯನ್ನು ಹೊಸ ಹೆಸರು ಪ್ರತಿನಿಧಿಸುತ್ತದೆ’ ಎಂದು ಎಲ್‌ಆ್ಯಂಡ್‌ಟಿ ಕಂಪನಿಯ ಎಂ.ಡಿ. ಹಾಗೂ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.