ADVERTISEMENT

ಮಹೀಂದ್ರ ವಾಹನಗಳ ಬೆಲೆ ಶೇ 2.5ರಷ್ಟು ಹೆಚ್ಚಳ

ಪಿಟಿಐ
Published 14 ಏಪ್ರಿಲ್ 2022, 12:43 IST
Last Updated 14 ಏಪ್ರಿಲ್ 2022, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತಕ್ಷಣದಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಮಾದರಿಯ ವಾಹನಗಳ ಬೆಲೆಯನ್ನು ಶೇಕಡ 2.5ರಷ್ಟು ಹೆಚ್ಚಳ ಮಾಡಿರುವುದಾಗಿ ಗುರುವಾರ ಹೇಳಿದೆ.

ಇದರಿಂದಾಗಿ ವಾಹನಗಳ ಮಾದರಿ ಮತ್ತು ಆವೃತ್ತಿಗೆ ಅನುಗುಣವಾಗಿ ಎಕ್ಸ್‌ ಷೋರೂಂ ದರವು ₹ 10 ಸಾವಿರದಿಂದ ₹ 63 ಸಾವಿರದವರೆಗೆ ಏರಿಕೆ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಉಕ್ಕು, ಅಲ್ಯುಮಿನಿಯಂ ಸೇರಿದಂತೆ ಪ್ರಮುಖ ಲೋಹಗಳ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿರುವುದೇ ಬೆಲೆ ಏರಿಕೆಗೆ ಕಾರಣ ಎಂದು ಹೇಳಿದೆ. ಸರಕುಗಳ ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ತಯಾರಿಕಾ ವೆಚ್ಚದಲ್ಲಿ ಏರಿಕೆ ಆಗಿದೆ. ಹೀಗಾಗಿ ದರ ಪರಿಷ್ಕರಣೆಯ ಮೂಲಕ ಅದನ್ನು ಅತ್ಯಲ್ಪ ಪ್ರಮಾಣದಲ್ಲಿ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.