ADVERTISEMENT

ಮಲಬಾರ್‌ನಿಂದ ‘ಓಲೆ ಉತ್ಸವ’

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 19:37 IST
Last Updated 7 ಸೆಪ್ಟೆಂಬರ್ 2020, 19:37 IST
ಮಲಬಾರ್ ಗೋಲ್ಡ್
ಮಲಬಾರ್ ಗೋಲ್ಡ್   

ಬೆಂಗಳೂರು: ಮಲಬಾರ್‌ ಚಿನ್ನ ಮತ್ತು ವಜ್ರಾಭರಣ ಕಂಪನಿಯು ಗ್ರಾಹಕರಿಗಾಗಿ ‘ಕಿವಿಯೋಲೆ ಉತ್ಸವ’ ಆರಂಭಿಸಿದ್ದು, ಈ ಉತ್ಸವದಡಿ ಸೆ.25ರವರೆಗೆ ವಿವಿಧ ರಿಯಾಯಿತಿಗಳನ್ನು ಘೋಷಿಸಿದೆ.

ಮಲಬಾರ್‌ನ ಎಲ್ಲ ಮಳಿಗೆಗಳಲ್ಲಿ ವಿಭಿನ್ನ ವಿನ್ಯಾಸದ ನೂರಾರು ಬಗೆಯ ಕಿವಿಯೋಲೆಗಳ ಪ್ರದರ್ಶನ ನಡೆಯಲಿದೆ. ಚಿನ್ನ ಮತ್ತು ವಜ್ರದಿಂದ ತಯಾರಿಸಿದ ಕಿವಿಯೋಲೆಗಳು ಗಮನ ಸೆಳೆಯಲಿವೆ. ಇದೇ ಸಂದರ್ಭದಲ್ಲಿ 22 ಕ್ಯಾರಟ್‌ನ ಹಳೆಯ ಚಿನ್ನಾಭರಣಗಳ ವಿನಿಮಯ ಮಾಡಿಕೊಂಡರೆ ಯಾವುದೇ ಶುಲ್ಕ ಕಡಿತಗೊಳಿಸುವುದಿಲ್ಲ ಎಂದು ಕಂಪನಿ ಹೇಳಿದೆ.

ಕನಿಷ್ಠ ಶೇ 10ರಷ್ಟು ಶುಲ್ಕ ಪಾವತಿಸುವ ಮೂಲಕ ಕಿವಿಯೋಲೆಗಳನ್ನು ಕಾಯ್ದಿರಿಸಬಹುದು. ಚಿನ್ನದ ಬೆಲೆಯಲ್ಲಿ ಏರಿಳಿತವಾದರೂ, ಕಾಯ್ದಿರಿಸಿದ ದಿನ ಇದ್ದ ಬೆಲೆಯನ್ನೇ ಪರಿಗಣಿಸಲಾಗುವುದು ಎಂದೂ ಕಂಪನಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.