ADVERTISEMENT

ವಧುವಿನ ಸಿಂಗಾರಕ್ಕೆ ಮಲಬಾರ್‌ ಆಭರಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 21:10 IST
Last Updated 20 ಆಗಸ್ಟ್ 2020, 21:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಕಂಪನಿಯು ‘ಬ್ರೈಡ್ಸ್‌ ಆಫ್‌ ಇಂಡಿಯಾದ’ 8ನೇ ಆವೃತ್ತಿಯನ್ನು ಗುರುವಾರ ಅನಾವರಣಗೊಳಿಸಿದೆ. ಈ ಮೂಲಕ ವಿವಾಹ ಸಮಾರಂಭಗಳಿಗೆ ಹೆಚ್ಚಿನ ಮೆರುಗು ನೀಡುವಂತ ಆಭರಣಗಳನ್ನು ಹೊರತಂದಿದೆ.

ಕೋವಿಡ್‌ ಸಂದರ್ಭದಲ್ಲಿ ವಿವಾಹ ಆಚರಣೆಯ ಸ್ವರೂಪ ಬದಲಾಗಿದೆ. ಹಾಗಿದ್ದರೂ, ವಧುವಿಗೆ ಇದು ತನ್ನ ಜೀವನದ ಅತ್ಯಮೂಲ್ಯ ದಿನ ಎನ್ನುವ ಭಾವನೆ ಬದಲಾಗದೇ ಇರುವಂತೆ ಮಾಡುವುದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಈ ಆವೃತ್ತಿಯ ಉದ್ದೇಶವಾಗಿದೆ.

‘ಈ ಆವೃತ್ತಿಯ ಆಭರಣಗಳು ವಧುವಿನ ಸೌಂದರ್ಯವನ್ನು ಇಮ್ಮಡಿಗೊಳಿಸುವಂತೆ ಬಹಳ ನಾಜೂಕಿನಿಂದ ವಿನ್ಯಾಸಗೊಳಿಸಲಾಗಿದೆ’ ಎಂದು ಮಲಬಾರ್‌ ಸಮೂಹದ ಅಧ್ಯಕ್ಷ ಎಂ.ಪಿ. ಅಹಮ್ಮದ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.