ADVERTISEMENT

ಮನಾ ಪ್ರಾಜೆಕ್ಟ್ಸ್‌ಗೆ ‘ಗಬಾ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 5:20 IST
Last Updated 20 ಮಾರ್ಚ್ 2020, 5:20 IST
ಪ್ರಶಸ್ತಿಯೊಂದಿಗೆ ಮನಾ ಪ್ರೊಜೆಕ್ಟ್ಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ರೆಡ್ಡಿ
ಪ್ರಶಸ್ತಿಯೊಂದಿಗೆ ಮನಾ ಪ್ರೊಜೆಕ್ಟ್ಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ರೆಡ್ಡಿ   

ಬೆಂಗಳೂರು: ವರ್ಷದ ಪರಿಸರ ಸ್ನೇಹಿ ನಾವೀನ್ಯ ಯೋಜನೆಗಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿ ಮನಾ ಪ್ರಾಜೆಕ್ಟ್ಸ್‌ಗೆ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಗಬಾ’ಪ್ರಶಸ್ತಿ (ಗ್ಲೋಬಲ್‌ ಆರ್ಕಿಟೆಕ್ಟ್‌ ಆ್ಯಂಡ್‌ ಬಿಲ್ಡರ್‌ ಅವಾರ್ಡ್ಸ್‌) ಲಭಿಸಿದೆ.ದುಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.

ವಿವಿಧ ದೇಶಗಳಲ್ಲಿರುವ ಆರ್ಕಿಟೆಕ್ಟ್‌, ಬಿಲ್ಡರ್ಸ್ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಕ್ರೀಯಾಶೀಲ ಮತ್ತು ನಾವೀನ್ಯತೆ ಸಾಧಿಸಿರುವವರನ್ನು ಪ್ರೋತ್ಸಾಹಿಸುವುದು ಈಪ್ರಶಸ್ತಿಯ ಉದ್ದೇಶವಾಗಿದೆ.

‘ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯ ಬಳಿ ಮನಾ ಫಾರೆಸ್ಟಾಯೋಜನೆ ನಿರ್ಮಿಸಲಾಗಿದೆ. ಇಲ್ಲಿ 225 ಮರಗಳು, ಒಂದು ಸಾವಿರಕ್ಕೂ ಹೆಚ್ಚು ಅಲಂಕಾರಿ ಹೂವಿನ ಗಿಡಗಳಿವೆ.ಹಚ್ಚ ಹಸಿರಿನ ಜತೆಗೆ 60ಕ್ಕೂ ಹೆಚ್ಚು ಜೀವನ ಶೈಲಿಯ ಸೌಲಭ್ಯಗಳನ್ನು ಹೊಂದಿದೆ’ ಎಂದುಮನಾ ಪ್ರಾಜೆಕ್ಟ್ಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.