ADVERTISEMENT

ಬೆಂಗಳೂರು: ಮಾರ್ಗದರ್ಶಿ ಚಿಟ್ ಫಂಡ್‌ ಹೊಸ ಶಾಖೆ ಕೆಂಗೇರಿಯಲ್ಲಿ ಆರಂಭ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 19:59 IST
Last Updated 11 ಡಿಸೆಂಬರ್ 2024, 19:59 IST
ಮಾರ್ಗದರ್ಶಿ
ಮಾರ್ಗದರ್ಶಿ   

ಬೆಂಗಳೂರು: ಮಾರ್ಗದರ್ಶಿ ಚಿಟ್ ಫಂಡ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯು ನಗರದ ಕೆಂಗೇರಿಯಲ್ಲಿ ಹೊಸ ಶಾಖೆ ಆರಂಭಿಸಿದೆ. ಈ ಶಾಖೆಯ ಆರಂಭದಿಂದ ಕಂಪನಿಯ ಒಟ್ಟು ಶಾಖೆಗಳ ಸಂಖ್ಯೆ 119ಕ್ಕೇರಿದೆ.

‘ಕೆಂಗೇರಿಯಲ್ಲಿನ ಹೊಸ ಶಾಖೆ ಆರಂಭದಿಂದ ಕರ್ನಾಟಕದ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದೇವೆ. ಜನರ ಹಣಕಾಸಿನ ಅಗತ್ಯತೆ ಪೂರೈಸಿಕೊಳ್ಳಲು ಅನುಕೂಲವಾಗಿದೆ. ಗ್ರಾಹಕರಿಗೆ ಸುರಕ್ಷತೆ, ಪಾರದರ್ಶಕತೆ ಮತ್ತು ಶಿಸ್ತುಬದ್ಧವಾಗಿ ಸೇವೆ ಒದಗಿಸಲು ಬದ್ಧವಾಗಿದ್ದೇವೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಾನ್‌ ಹೇಳಿದ್ದಾರೆ. 

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಶಾಖೆಗಳನ್ನು ಹೊಂದಿದ್ದು, 60 ಲಕ್ಷಕ್ಕೂ ಹೆಚ್ಚು ಚಂದಾದಾರರು ಇದ್ದಾರೆ. ₹9,396 ಕೋಟಿ ವಹಿವಾಟನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.