ADVERTISEMENT

ಮಾರಾಟದ ಒತ್ತಡ: ಸೂಚ್ಯಂಕ ಇಳಿಕೆ

ಮೂರು ವಹಿವಾಟಿನ ದಿನಗಳ ಓಟಕ್ಕೆ ತಡೆ

ಪಿಟಿಐ
Published 29 ಮೇ 2019, 18:04 IST
Last Updated 29 ಮೇ 2019, 18:04 IST
   

ಮುಂಬೈ: ದೇಶದ ಷೇರುಪೇಟೆಗಳಲ್ಲಿನ ಮೂರು ದಿನಗಳ ಸೂಚ್ಯಂಕದ ಓಟಕ್ಕೆ ಬುಧವಾರ ತೆರೆ ಬಿದ್ದಿದೆ. ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆದು ಸೂಚ್ಯಂಕಗಳು ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 247 ಅಂಶ ಇಳಿಕೆಯಾಗಿ 39,502 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಪ್ಟಿ 67 ಅಂಶ ಇಳಿಕೆ ಕಂಡು 11,861 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಎರಡೂ ಸೂಚ್ಯಂಕಗಳು ಹಿಂದಿನ ಮೂರು ವಹಿವಾಟುಗಳಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದವು.

10 ವರ್ಷಗಳ ಅವಧಿಯ ಅಮೆರಿಕದ ಬಾಂಡ್‌ಗಳ ಗಳಿಕೆಯು ಮೂರು ತಿಂಗಳ ದರಕ್ಕಿಂತಲೂ ಕೆಳಕ್ಕಿಳಿದಿದೆ. ಇದರ ಜತೆಗೆ ಅಮೆರಿಕ–ಚೀನಾ ವ್ಯಾಪಾರ ಮಾರುಕತೆಯಲ್ಲಿ ಯಾವುದೇ ಪ್ರಗತಿ ಕಾಣದೇ ಇರುವುದು ಸಹ ನಕಾರಾತ್ಮಕ ಚಲನೆಗೆ ಕಾರಣವಾಗಿದೆ.

ಎಸ್‌ಬಿಐ ಶೇ 3.29ರಷ್ಟು ಗರಿಷ್ಠ ನಷ್ಟ ಕಂಡಿದೆ. ಟಾಟಾ ಸ್ಟೀಲ್‌, ಐಸಿಐಸಿಐ ಬ್ಯಾಂಕ್‌ ಮತ್ತು ಮಾರುತಿ ಶೇ 2.76ರವರೆಗೂ ಏರಿಕೆ ಕಂಡಿವೆ.

ರೂಪಾಯಿ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 69.83ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.