ADVERTISEMENT

ಐ.ಟಿ., ಬ್ಯಾಂಕಿಂಗ್‌ ಷೇರುಗಳ ಗಳಿಕೆ: ಸೆನ್ಸೆಕ್ಸ್‌ ಏರಿಕೆ

ಪಿಟಿಐ
Published 27 ಮೇ 2022, 12:46 IST
Last Updated 27 ಮೇ 2022, 12:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಐ.ಟಿ., ಬ್ಯಾಂಕ್‌ ಮತ್ತು ವಾಹನ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು. ಇದರಿಂದಾಗಿ ದೇಶದ ಷೇರುಪೇಟೆಗಳಲ್ಲಿ ಶುಕ್ರವಾರವೂ ಸಕಾರಾತ್ಮಕ ವಹಿವಾಟು ಮುಂದುವರಿಯಿತು.

ಎರಡು ದಿನಗಳಲ್ಲಿ ಸೂಚ್ಯಂಕಗಳ ಏರಿಕೆಯಿಂದಾಗಿ ಸತತ ಎರಡನೇ ವಾರವೂ ವಹಿವಾಟು ಗಳಿಕೆಯೊಂದಿಗೆ ಅಂತ್ಯವಾಗಲು ನೆರವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 632 ಅಂಶ ಏರಿಕೆಯಾಗಿ 54,884 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 182 ಅಂಶ ಹೆಚ್ಚಾಗಿ 16,352 ಅಂಶಗಳಿಗೆ ತಲುಪಿತು.ಸೆನ್ಸೆಕ್ಸ್‌ನಲ್ಲಿ ಟೆಕ್‌ ಮಹೀಂದ್ರ ಷೇರು ಮೌಲ್ಯ ಶೇ 4.10ರಷ್ಟು ಗರಿಷ್ಠ ಏರಿಕೆ ಕಂಡಿತು. ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 558 ಅಂಶ ಮತ್ತು ನಿಫ್ಟಿ 86 ಅಂಶ ಏರಿಕೆ ಕಂಡಿವೆ.

ADVERTISEMENT

ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಗಳಿಕೆಯುದೇಶಿ ಷೇರುಪೇಟೆಗಳ ಮೇಲೆ ಪ್ರಭಾವ ಬೀರಿತು. ಅಮೆರಿಕದ ರಿಟೇಲ್‌ ಗಳಿಕೆಯು ಉತ್ತಮ ಆಗಿರುವುದರಿಂದ ಹೂಡಿಕೆದಾರರು ಖರೀದಿಗೆ ಗಮನ ಹರಿಸಿದ್ದಾರೆಎಂದು ಜಿಯೋಜಿತ್‌ ಹಣಕಾಸು ಸೇವಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಮುಂಬರುವ ಆರ್‌ಬಿಐನ ಹಣಕಾಸು ನೀತಿ ಸಭೆಯು ಮಾರುಕಟ್ಟೆಯ ಚಲನೆಗೆ ಮುಖ್ಯವಾಗಲಿದೆ. ಶೇ 0.25 ರಿಂದ ಶೇ 0.35ರವರೆಗೆ ಬಡ್ಡಿದರ ಏರಿಕೆ ಆಗಲಿದೆ ಎನ್ನುವುದು ಮಾರುಕಟ್ಟೆಯ ನಿರೀಕ್ಷೆ ಆಗಿದೆ ಎಂದು ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 0.95ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 118.5 ಡಾಲರ್‌ಗಳಿಗೆ ಏರಿಕೆ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.