ADVERTISEMENT

ವಿದೇಶಿ ಬಂಡವಾಳ ಹೊರಹರಿವು: ಸೆನ್ಸೆಕ್ಸ್ ಮತ್ತಷ್ಟು ಇಳಿಕೆ

ಪಿಟಿಐ
Published 14 ಜೂನ್ 2022, 13:42 IST
Last Updated 14 ಜೂನ್ 2022, 13:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಇಳಿಕೆ ಹಾಗೂ ವಿದೇಶಿ ಬಂಡವಾಳ ಹೊರಹರಿವಿನ ಕಾರಣದಿಂದಾಗಿ ಹೂಡಿಕೆದಾರರು ರಿಸ್ಕ್ ಹೆಚ್ಚಿರುವ ಹೂಡಿಕೆಗಳಿಂದ ದೂರ ಉಳಿದರು. ಇದರ ಪರಿಣಾಮವಾಗಿ ಸೆನ್ಸೆಕ್ಸ್, ನಿಫ್ಟಿ ಮಂಗಳವಾರ ಇಳಿಕೆ ಕಂಡವು.

ಅಮೆರಿಕದ ಫೆಡರಲ್ ರಿಸರ್ವ್‌ ಬಡ್ಡಿ ದರ ವಿಚಾರವಾಗಿ ಬುಧವಾರ ತೀರ್ಮಾನ ಕೈಗೊಳ್ಳಲಿದೆ. ಹೂಡಿಕೆದಾರರು ಇದರ ಮೇಲೆ ಗಮನ ಇರಿಸಿದ್ದು, ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 153 ಅಂಶ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 42 ಅಂಶ ಇಳಿಕೆ ಕಂಡಿವೆ. ‘ದೇಶಿ ಷೇರುಪೇಟೆಗಳಲ್ಲಿ ಭಾರಿ ಪ್ರಮಾಣದ ಮಾರಾಟ ಕಾಣಲಿಲ್ಲ. ಚಿಲ್ಲರೆ ಹಣದುಬ್ಬರ ಪ್ರಮಾಣವು ಮೇ ತಿಂಗಳಲ್ಲಿ ತುಸು ತಗ್ಗಿರುವುದು ಸಮಾಧಾನ ಮೂಡಿಸಿದೆ. ಹೀಗಿದ್ದರೂ, ಸಗಟು ಹಣದುಬ್ಬರ ಪ್ರಮಾಣವು ಮಾರುಕಟ್ಟೆಯ ಮೇಲೆ ಪರಿಣಾಮ ಉಂಟುಮಾಡಿತು’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.68ರಷ್ಟು ಜಾಸ್ತಿಯಾಗಿ ಪ್ರತಿ ಬ್ಯಾರೆಲ್‌ಗೆ 123.1 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.