ಹೊಸ ಎತ್ತರಕ್ಕೆ ಬಿಎಸ್‌ಇ, ನಿಫ್ಟಿ
ಮುಂಬೈ: ದೇಶದ ಷೇರುಪೇಟೆಗಳ ಸೂಚ್ಯಂಕಗಳು ಸತತ ಏಳನೇ ದಿನವೂ ಏರಿಕೆ ಕಂಡವು. ಬುಧವಾರದ ವಹಿವಾಟಿನಲ್ಲಿಯೂ ಷೇರುಪೇಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದವು.
ರಿಲಯನ್ಸ್ ಇಂಡಸ್ಟ್ರಿಸ್, ಐಟಿಸಿ ಮತ್ತು ಎಲ್ ಆ್ಯಂಡ್ ಟಿ ಕಂಪನಿಗಳ ಷೇರುಗಳ ಗಳಿಕೆ ಮತ್ತು ವಿದೇಶಿ ಬಂಡವಾಳ ಒಳಹರಿವು ಸೂಚ್ಯಂಕಗಳ ಏರಿಕೆಗೆ ನೆರವಾದವು.
ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ 357 ಅಂಶ ಇಳಿಕೆ ಕಂಡು 69,653 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 82 ಅಂಶ ಹೆಚ್ಚಾಗಿ 20,937 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.
ಬಿಎಸ್‌ಇನಲ್ಲಿ ವಿಪ್ರೊ ಷೇರು ಮೌಲ್ಯ ಶೇ 3.85ರಷ್ಟು ಹೆಚ್ಚಾಯಿತು. ಐಟಿಸಿ ಶೇ 2.51, ಎಲ್ ಅ್ಯಂಡ್ ಟಿ ಶೇ 2.31ರಷ್ಟು ಗಳಿಕೆ ಕಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.