ADVERTISEMENT

ರಿಲಯನ್ಸ್, ಒಎನ್‌ಜಿಸಿ ಷೇರು ಮೌಲ್ಯ ಇಳಿಕೆ

ಪಿಟಿಐ
Published 1 ಜುಲೈ 2022, 16:28 IST
Last Updated 1 ಜುಲೈ 2022, 16:28 IST

ಮುಂಬೈ (ಪಿಟಿಐ): ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನ ಮೇಲೆ ಕೇಂದ್ರ ಸರ್ಕಾರವು ತೆರಿಗೆ ವಿಧಿಸಿದ ನಂತರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌, ಒಎನ್‌ಜಿಸಿ ಷೇರು ಮೌಲ್ಯ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ.

ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 111 ಅಂಶ ಕುಸಿದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 28 ಅಂಶ ಇಳಿಕೆ ಕಂಡಿದೆ.

ಕೇಂದ್ರ ಸರ್ಕಾರವು ಶುಕ್ರವಾರದಿಂದ ಜಾರಿಗೆ ಬರುವಂತೆ ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ ರಫ್ತಿಗೆ ತೆರಿಗೆ ವಿಧಿಸಿದೆ. ಅಲ್ಲದೆ, ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲೆ ‘ಆಕಸ್ಮಿಕ ಲಾಭ ತೆರಿಗೆ’ ಹೇರಿದೆ.

ADVERTISEMENT

ರಿಲಯನ್ಸ್ ಷೇರು ಮೌಲ್ಯವು ಶುಕ್ರವಾರ ಶೇ 7.14ರಷ್ಟು ಕುಸಿದಿದೆ. ಒಎನ್‌ಜಿಸಿ ಷೇರು ಮೌಲ್ಯವು ಶೇ 13.40ರಷ್ಟು ಇಳಿಕೆ ಆಗಿದೆ. ‘ಮಾರುಕಟ್ಟಿಯಲ್ಲಿ ಅಸ್ಥಿರತೆ ಮುಂದುವರಿಯುವ ನಿರೀಕ್ಷೆ ಇದೆ. ಚೀನಾದ ಹಣದುಬ್ಬರಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಮುಂದಿನ ವಾರ ಬಿಡುಗಡೆ ಆಗಲಿದ್ದು, ಅದು ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಲಿದೆ’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ನ ಈಕ್ವಿಟಿ ಸಂಶೋಧನಾ ಮುಖಸ್ಥೆ ಯಶಾ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.