ನವದೆಹಲಿ: ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ ₹ 1,587 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿದ್ದ ₹ 1,524 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 4.13ರಷ್ಟು ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಕಾರ್ಯಾಚರಣಾ ವರಮಾನ ₹ 19,680 ಕೋಟಿಗಳಿಂದ ₹ 20,721 ಕೋಟಿಗಳಿಗೆ ಶೇ 5ರಷ್ಟು ಏರಿಕೆಯಾಗಿದೆ.
ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟಾರೆ 4,37,361 ವಾಹನಗಳನ್ನು ಮಾರಾಟ ಮಾಡಿದ್ದ, ಕಳೆದ ಬಾರಿಗಿಂತಲೂ ಶೇ 2ರಷ್ಟು ಹೆಚ್ಚಾಗಿದೆ.
ನಿವ್ವಳ ಲಾಭ (ಏಪ್ರಿಲ್–ಡಿಸೆಂಬರ್)
₹4,355 ಕೋಟಿ:2019
₹ 64,594 ಕೋಟಿ:2018
16%:ವಾಹನ ಮಾರಾಟದಲ್ಲಿ ಆಗಿರುವ ಇಳಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.