ADVERTISEMENT

ಮಾರುತಿ ‘ಆಲ್ಟೊ 800’ತಯಾರಿಕೆ ಸ್ಥಗಿತ?

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 20:15 IST
Last Updated 26 ನವೆಂಬರ್ 2018, 20:15 IST
ಆಲ್ಟೊ ಕಾರ್‌
ಆಲ್ಟೊ ಕಾರ್‌   

ಬೆಂಗಳೂರು: ಮಾರುತಿ ಸುಜುಕಿ ಇಂಡಿಯಾದ ಜನಪ್ರಿಯ ‘ಆಲ್ಟೊ 800’ ಕಾರ್‌ ತಯಾರಿಕೆಯು 2019ರಲ್ಲಿ ಸ್ಥಗಿತಗೊಳ್ಳಲಿದೆ.

ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡಗಳನ್ನು ಈ ಕಾರ್‌ನಲ್ಲಿ ಅಳವಡಿಸಲು ಸಾಧ್ಯವಿಲ್ಲದ ಕಾರಣಕ್ಕೆ ತಯಾರಿಕೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.

ಸಣ್ಣ ಕುಟುಂಬಗಳ ಅಚ್ಚುಮೆಚ್ಚಿನ ಈ ಕಾರ್‌ನ ತಯಾರಿಕೆಯನ್ನು 2019ರ ದ್ವಿತೀಯಾರ್ಧ ಇಲ್ಲವೆ ಮೂರನೇ ತ್ರೈಮಾಸಿಕದ ಅವಧಿಯಲ್ಲಿ ನಿಲ್ಲಿಸಲಾಗುವುದು.

ADVERTISEMENT

ಭವಿಷ್ಯದಲ್ಲಿನ ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಮತ್ತು ಅಪಘಾತ ಪರೀಕ್ಷಾ ನಿಯಮಗಳಿಗೆ ಸೂಕ್ತವಾಗಿ ಹೊಂದಾಣಿಕೆಯಾಗದ ಕಾರ್‌ಗಳ ತಯಾರಿಕೆಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ಸಂಸ್ಥೆ ತೀರ್ಮಾನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.