ADVERTISEMENT

ಮಾರುತಿ ವಾಹನಗಳ ಬೆಲೆ ಶೇ 1.9ರವರೆಗೆ ಹೆಚ್ಚಳ

ಪಿಟಿಐ
Published 18 ಏಪ್ರಿಲ್ 2022, 10:40 IST
Last Updated 18 ಏಪ್ರಿಲ್ 2022, 10:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತಕ್ಷಣದಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಮಾದರಿಗಳ ಬೆಲೆಯನ್ನು ಶೇಕಡ 0.9ರಿಂದ ಶೇ 1.9ರವರೆಗೆ ಹೆಚ್ಚಳ ಮಾಡಿದೆ.

ಇದರಿಂದಾಗಿ ದೆಹಲಿಯಲ್ಲಿ ಎಕ್ಸ್‌ ಷೋರೂಂ ಬೆಲೆಯು ಶೇ 1.3ರಷ್ಟು ಹೆಚ್ಚಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಯಾರಿಕಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಮಾಡಿರುವುದಾಗಿ ಕಂಪನಿ ತಿಳಿಸಿದೆ. 2021ರ ಜನವರಿಯಿಂದ 2022ರ ಮಾರ್ಚ್‌ ಅವಧಿಯವರೆಗೆ ವಾಹನಗಳ ಬೆಲೆಯನ್ನು ಶೇ 8.8ರಷ್ಟು ಹೆಚ್ಚಳ ಮಾಡಿದೆ. ಸೋಮವಾರದ ದರ ಏರಿಕೆಯನ್ನೂ ಪರಿಗಣಿಸಿದರೆ ಒಟ್ಟಾರೆ ಏರಿಕೆಯು ಶೇ 10.7ಕ್ಕೆ ತಲುಪಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.