ADVERTISEMENT

ಮಾರುತಿ ವಾಹನಗಳ ಬೆಲೆ ಶೇ 4.3ರವರೆಗೆ ಹೆಚ್ಚಳ

ಪಿಟಿಐ
Published 15 ಜನವರಿ 2022, 11:43 IST
Last Updated 15 ಜನವರಿ 2022, 11:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಶೇ 4.3ರವರೆಗೆ ಏರಿಕೆ ಮಾಡಿದೆ.

ತಯಾರಿಕಾ ವೆಚ್ಚ ಹೆಚ್ಚಳವನ್ನು ಸರಿದೂಗಿಸುವ ಸಲುವಾಗಿ ಶೇ 0.1 ರಿಂದ ಶೇ 4.3ರವರೆಗೆ ಬೆಲೆ ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ ಎಂದು ಕಂಪನಿಯು ಶನಿವಾರ ತಿಳಿಸಿದೆ.

ದೆಹಲಿಯಲ್ಲಿ ಎಲ್ಲಾ ಮಾದರಿಗಳ ಎಕ್ಸ್‌ ಷೋರೂಂ ಬೆಲೆಯು ಸರಾಸರಿ ಶೇ 1.7ರಷ್ಟು ಏರಿಕೆ ಆಗಲಿದೆ. ಹೊಸ ದರವು ಶನಿವಾರದಿಂದಲೇ ಜಾರಿಯಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಕಂಪನಿಯು ಕಳೆದ ವರ್ಷ ಮೂರು ಬಾರಿ ದರ ಏರಿಕೆ ಮಾಡಿದೆ. 2021ರ ಜನವರಿಯಲ್ಲಿ ಶೇ 1.4ರಷ್ಟು, ಏಪ್ರಿಲ್‌ನಲ್ಲಿ ಶೇ 1.6ರಷ್ಟು ಮತ್ತು ಸೆಪ್ಟೆಂಬರ್‌ನಲ್ಲಿ ಶೇ 1.9ರಷ್ಟು ಬೆಲೆ ಹೆಚ್ಚಿಸಿದೆ. ಇದರಿಂದಾಗಿ ಒಟ್ಟಾರೆ ಬೆಲೆ ಹೆಚ್ಚಳವು ಶೇ 4.9ರಷ್ಟಾಗಿದೆ.

ಉಕ್ಕು, ಅಲ್ಯುಮಿನಿಯಂ, ತಾಮ್ರ, ಪ್ಲಾಸ್ಟಿಕ್‌ ಮತ್ತು ಇತರೆ ಲೋಹಗಳ ಬೆಲೆಯು ಒಂದು ವರ್ಷದಿಂದ ಏರಿಕೆ ಆಗುತ್ತಿದೆ. ಹೀಗಾಗಿ ವಾಹನಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕಂಪನಿಯು ಡಿಸೆಂಬರ್‌ನಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.