ADVERTISEMENT

ಸುಜುಕಿ ಜಿಮ್ನಿ ಅನಾವರಣ

ವಾಹನ ಪ್ರದರ್ಶನ ಮೇಳದಲ್ಲಿ ಎಸ್‌ಯುವಿ ಅನಾವರಣ

ಪಿಟಿಐ
Published 18 ಫೆಬ್ರುವರಿ 2020, 3:05 IST
Last Updated 18 ಫೆಬ್ರುವರಿ 2020, 3:05 IST

ಗ್ರೇಟರ್‌ ನೋಯಿಡಾ: ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಕಂಪನಿಯು ವಾಹನ ಪ್ರದರ್ಶನ ಮೇಳದಲ್ಲಿ ಶನಿವಾರ ಆಫ್‌ ರೋಡ್‌ ವೆಹಿಕಲ್‌ ಸುಜುಕಿ ಜಿಮ್ನಿಅನಾವರಣಗೊಳಿಸಿತು.

ನಾಲ್ಕನೇ ಪೀಳಿಗೆಯ ಸಣ್ಣ ಎಸ್‌ಯುವಿ, 1.5 ಲೀಟರ್ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಭಾರತದಲ್ಲಿ ಇದು ಖರೀದಿಗೆ ಲಭ್ಯವಿಲ್ಲ. ಆದರೆ, ಆಟೊ ಎಕ್ಸ್‌ಪೋದಲ್ಲಿ ಪ್ರದರ್ಶನ ಕಂಡಿರುವುದರಿಂದ ಶೀಘ್ರವೇ ಮಾರುಕಟ್ಟೆಗೆ ಬರುವ ನಿರೀಕ್ಷೆ ಮಾಡಬಹುದಾಗಿದೆ.

ಸದ್ಯ, 194 ದೇಶಗಳಲ್ಲಿ ಮಾರಾಟವಾಗುತ್ತಿದೆ. 28 ಲಕ್ಷಕ್ಕೂ ಅಧಿಕ ಮಾರಾಟ ಕಂಡಿದೆ.

ADVERTISEMENT

‘ಭಾರತದ ಗ್ರಾಹಕರ ಗಮನ ಸೆಳೆಯುವ ಉದ್ದೇಶದಿಂದಲೇ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ’ ಎಂದು ಮಾರುತಿ ಸುಜುಕಿ ಇಂಡಿಯಾದಸಿಇಒ ಕೆನೆಚಿ ಆಯುಕಾವಾ ತಿಳಿಸಿದ್ದಾರೆ.

ವೃತ್ತಿಪರ ಬಳಕೆದಾರರ ಅಗತ್ಯಗಳು ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.