ADVERTISEMENT

ವಾಹನ ಸಾಲ: ಮಾರುತಿ–ಇಂಡಸ್‌ಇಂಡ್‌ ಬ್ಯಾಂಕ್‌ ಒಪ್ಪಂದ

ಪಿಟಿಐ
Published 16 ಜೂನ್ 2020, 15:51 IST
Last Updated 16 ಜೂನ್ 2020, 15:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ಸಂದರ್ಭದಲ್ಲಿ ಗ್ರಾಹಕರಿಗೆ ಸುಲಭವಾಗಿ ವಾಹನ ಸಾಲ ಸಿಗುವಂತೆ ಮಾಡಲು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಇಂಡಸ್‌ಇಂಡ್‌ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಗ್ರಾಹಕರು ಮೂರು ತಿಂಗಳವರೆಗೆ ₹ 1 ಲಕ್ಷದ ಸಾಲಕ್ಕೆ ₹ 899ರ ಇಎಂಐ ಯೋಜನೆ ಪಡೆಯಬಹುದು. ₹ 1 ಲಕ್ಷಕ್ಕೆ ₹1,800ರ ಇಎಂಐನಲ್ಲಿ ಸ್ಟೆಪ್‌ ಅಪ್‌ ಯೋಜನೆ ಹಾಗೂ ಶೇ 100ರಷ್ಟು ಆನ್‌ರೋಡ್‌ ಫಂಡಿಂಗ್‌ ಸಹ ಸಿಗಲಿದೆ. ಇದಕ್ಕೆ ಆದಾಯದ ದಾಖಲೆಪತ್ರ ನೀಡಬೇಕು. ಆದಾಯ ಪತ್ರ ಇಲ್ಲದೇ ಇದ್ದರೆ ಎಕ್ಸ್‌ ಷೋರೂಂ ಬೆಲೆಗೆ ಶೇ 100ರವರೆಗೂ ನೆರವು ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಎಲ್ಲಾ ಮಾದರಿಯ ವಾಹನಗಳಿಗೂ ಈ ಕೊಡುಗೆಗಳು ಅನ್ವಯಿಸಲಿವೆ.

ADVERTISEMENT

ವೇತನದಾರರು, ಸ್ವಯಂ ಉದ್ಯೋಗ ಮಡುವವರು, ಕೃಷಿಕರು ಮತ್ತು ಉದ್ಯಮಿಗಳುಇಂಡಸ್‌ಇಂಡ್‌ ಬ್ಯಾಂಕ್‌ನ ಗ್ರಾಹಕರಾಗಿದ್ದು, ಈ ಒಪ್ಪಂದವು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದೆ.

ಕಂಪನಿಯು ದೇಶದಾದ್ಯಂತ 3,086 ಷೋರೂಂಗಳನ್ನು ಹೊಂದಿದೆ. ಬ್ಯಾಂಕ್‌ ದೇಶದಾದ್ಯಂತ 1,900 ಶಾಖೆಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.