ADVERTISEMENT

ಮ್ಯಾಕ್ಸ್‌ಲೈಫ್‌ ಇನ್ಶುರೆನ್ಸ್‌ನ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 20:31 IST
Last Updated 21 ಫೆಬ್ರುವರಿ 2020, 20:31 IST

ಬೆಂಗಳೂರು: ಮ್ಯಾಕ್ಸ್‌ಲೈಫ್ ಇನ್ಶುರೆನ್ಸ್‌, ‘ಗ್ಯಾರಂಟೀಡ್ ಲೈಫ್‍ಟೈಮ್ ಇನ್‍ಕಂ ಪ್ಲ್ಯಾನ್’ ಪರಿಚಯಿಸಿದೆ.

‘ಗ್ರಾಹಕರಿಗೆ ನಿವೃತ್ತಿ ನಂತರ ಹೆಚ್ಚು ಆದಾಯ ಬರುವ ರೀತಿಯಲ್ಲಿ ಈ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ಸೇವಾ ನಿವೃತ್ತಿ ನಂತರದ ಬದುಕಿಗೆ ಇದು ನಿಗದಿತವಾಗಿ ಆದಾಯ ತಂದುಕೊಡುತ್ತದೆ. ಹೀಗಾಗಿ ನಿವೃತ್ತಿ ನಂತರದ ಜೀವನ ಹೆಚ್ಚು ಆರಾಮದಾಯಕವಾಗಿರುತ್ತದೆ. ವ್ಯಕ್ತಿಗಳು ದುಡಿಯುವ ಸಂದರ್ಭದಲ್ಲಿಯೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ನಂತರ ನಿಗದಿತ ಆದಾಯ ತಂದುಕೊಡಲಿದೆ. ಮರಣ ಪರಿಹಾರ, ಸಾಲ ಸೌಲಭ್ಯ, ಸರೆಂಡರ್ ಆಯ್ಕೆ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ಇದರಲ್ಲಿ ಇವೆ’ ಎಂದು ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಅಲೋಕ್ ಭಾನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT