ಎಲ್‌ಐಸಿ
ನವದೆಹಲಿ: ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳು ಏರಿಕೆ ಕಂಡಿದ್ದರಿಂದ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್) ₹2.29 ಲಕ್ಷ ಕೋಟಿ ಸೇರ್ಪಡೆಯಾಗಿದೆ.
ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ₹60,656 ಕೋಟಿ ಸೇರ್ಪಡೆಯಾಗಿದ್ದು, ನಿಗಮದ ಎಂ–ಕ್ಯಾಪ್ ₹6.23 ಲಕ್ಷ ಕೋಟಿಗೆ ಮುಟ್ಟಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ₹39,513 ಕೋಟಿ, ರಿಲಯನ್ಸ್ ಇಂಡಸ್ಟ್ರಿಸ್ ₹35,860 ಕೋಟಿ, ಭಾರ್ತಿ ಏರ್‌ಟೆಲ್ ₹32,657 ಕೋಟಿ, ಎಸ್‌ಬಿಐ ₹20,482 ಕೋಟಿ, ಐಸಿಐಸಿಐ ಬ್ಯಾಂಕ್ ₹15,858 ಕೋಟಿ, ಹಿಂದುಸ್ತಾನ್ ಯೂನಿಲಿವರ್ ₹11,947 ಕೋಟಿ, ಟಿಸಿಎಸ್ ₹10,058 ಕೋಟಿ ಮತ್ತು ಐಟಿಸಿಗೆ ₹2,555 ಕೋಟಿ ಎಂ–ಕ್ಯಾಪ್ ಸೇರ್ಪಡೆಯಾಗಿದೆ.
ಇನ್ಫೊಸಿಸ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ ₹18,477 ಕೋಟಿ ಕರಗಿದೆ. ಒಟ್ಟು ಎಂ–ಕ್ಯಾಪ್ ₹7.71 ಲಕ್ಷ ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.