ADVERTISEMENT

ಏಳು ಕಂಪನಿಗಳ ಎಂಕ್ಯಾಪ್‌ ₹3 ಲಕ್ಷ ಕೋಟಿಯಷ್ಟು ಏರಿಕೆ

ಪಿಟಿಐ
Published 10 ಡಿಸೆಂಬರ್ 2023, 15:51 IST
Last Updated 10 ಡಿಸೆಂಬರ್ 2023, 15:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಕಳೆದ ವಾರ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) 2,334 ಅಂಶಗಳಷ್ಟು ಏರಿಕೆ ಕಂಡಿತ್ತು. ಹಾಗಾಗಿ, ಕಂಪನಿಗಳ ಮಾರುಕಟ್ಟೆ ಮೌಲ್ಯ ಹೆಚ್ಚಳವಾಗಿದೆ.

ಎಷ್ಟು ಗಳಿಕೆ?

ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ ಮೌಲ್ಯ ₹74,076 ಕೋಟಿ, ಎಲ್‌ಐಸಿ ₹65,558 ಕೋಟಿ, ಐಸಿಐಸಿಐ ಬ್ಯಾಂಕ್‌ ₹ 45,466 ಕೋಟಿ, ಟಿಸಿಎಸ್‌ ₹ 42,737 ಕೋಟಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ₹ 42,454 ಕೋಟಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ₹ 37,617 ಕೋಟಿ ಮತ್ತು ಇನ್ಫೊಸಿಸ್‌ ₹ 15,916 ಕೋಟಿಯಷ್ಟು ಎಂ –ಕ್ಯಾಪ್‌ ಗಳಿಸಿವೆ. 

ಹಿಂದೂಸ್ತಾನ್‌ ಯೂನಿಲಿವರ್‌ ₹ 9,884 ಕೋಟಿ, ಭಾರ್ತಿ ಏರ್‌ಟೆಲ್‌ ₹ 8,569 ಕೋಟಿ ಮತ್ತು ಐಟಿಸಿ ಕಂಪನಿಯ ಮಾರುಕಟ್ಟೆ ಮೌಲ್ಯ ₹935 ಕೋಟಿಯಷ್ಟು ಇಳಿಕೆಯಾಗಿದೆ. 

ಪ್ರಮುಖ 10 ಕಂಪನಿಗಳ ಪೈಕಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮೌಲ್ಯಯುತ ಕಂಪನಿ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಟಿಸಿಎಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಇನ್ಫೊಸಿಸ್‌, ಹಿಂದೂಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌, ಭಾರ್ತಿ ಏರ್‌ಟೆಲ್‌, ಐಟಿಸಿ, ಎಸ್‌ಬಿಐ ಮತ್ತು ಎಲ್‌ಐಸಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.