ADVERTISEMENT

ಬ್ಯಾಂಕ್‌ ನೌಕರರ ವೇತನ ಶೇ 17ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:09 IST
Last Updated 8 ಡಿಸೆಂಬರ್ 2023, 16:09 IST

ಬೆಂಗಳೂರು: ಬ್ಯಾಂಕ್‌ ನೌಕರರಿಗೆ ವೇತನದಲ್ಲಿ ಶೇ 17ರಷ್ಟು ಹೆಚ್ಚಳ ಮಾಡಲು ಭಾರತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ) ಒಪ್ಪಿಗೆ ನೀಡಿದೆ.

ಈ ಹೆಚ್ಚಳವು 2022ರ ನವೆಂಬರ್ 1ರಿಂದಲೇ ಅನ್ವಯವಾಗುವಂತೆ  ಐದು ವರ್ಷಗಳ ಅವಧಿಗೆ ಇದು ಜಾರಿಯಲ್ಲಿ ಇರಲಿದೆ. ಈ ಸಂಬಂಧ ಗುರುವಾರ ನಡೆದ ಸಭೆಯಲ್ಲಿ ಐಬಿಎ ಮತ್ತು 9 ಸಂಘಟನೆಗಳನ್ನು ಒಳಗೊಂಡಿರುವ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಒಪ್ಪಂದಕ್ಕೆ ಸಹಿ ಮಾಡಿವೆ. ವೇತನ ಹೆಚ್ಚಳದಿಂದ ಎಸ್‌ಬಿಐ ಒಳಗೊಂಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹12,449 ಕೋಟಿಯಷ್ಟು ಹೊರೆ ಆಗಲಿದೆ.

ಬ್ಯಾಂಕ್‌ಗಳಿಗೆ ಪ್ರತಿ ಶನಿವಾರವೂ ರಜಾ ದಿನವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಐಬಿಎ ತಿಳಿಸಿದೆ. ಇದರಿಂದಾಗಿ ವಾರದಲ್ಲಿ ಐದು ದಿನ ಕೆಲಸದ ಬೇಡಿಕೆಯು ಈಡೇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.