ADVERTISEMENT

ಪಾಲುದಾರರನ್ನು ಹುಡುಕುತ್ತಿರುವ ಮೆಟ್ರೊ ಕ್ಯಾಶ್‌ ಆ್ಯಂಡ್ ಕ್ಯಾರಿ

ಪಿಟಿಐ
Published 20 ಮೇ 2022, 15:56 IST
Last Updated 20 ಮೇ 2022, 15:56 IST

ನವದೆಹಲಿ (ಪಿಟಿಐ): ‘ಮೆಟ್ರೊ ಕ್ಯಾಶ್‌ ಆ್ಯಂಡ್ ಕ್ಯಾರಿ ಇಂಡಿಯಾ’ದಲ್ಲಿನ ಷೇರುಪಾಲನ್ನು ಮಾರಾಟ ಮಾಡಲು ಅದರ ಮಾತೃಸಂಸ್ಥೆ ಜರ್ಮನಿಯ ಮೆಟ್ರೊ ಎಜಿ ಪಾಲುದಾರರನ್ನು ಅರಸುತ್ತಿದೆ.

ಭಾರತದ ವಹಿವಾಟು ಲಾಭದಾಯಕವಾಗಿ ಬೆಳೆಯಬೇಕು ಎಂಬ ಕಾರಣಕ್ಕೆ ಪಾಲುದಾರ ಕಂಪನಿಯನ್ನು ಹುಡುಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಮೆಜಾನ್, ರಿಲಯನ್ಸ್ ರಿಟೇಲ್, ಅವೆನ್ಯು ಸುಪರ್‌ಮಾರ್ಟ್ಸ್‌, ಟಾಟಾ ಸಮೂಹ, ಲುಲು ಸಮೂಹವನ್ನು ಸಂಪರ್ಕಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಭಾರತದಲ್ಲಿ ಜಾಲವನ್ನು ವಿಸ್ತರಿಸಲು, ಹೆಚ್ಚಿನ ಮಳಿಗೆಗಳನ್ನು ತೆರೆಯಲು ಹೆಚ್ಚು ಹೂಡಿಕೆ ಬೇಕು ಎಂದು ಮೂಲಗಳು ವಿವರಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.