ADVERTISEMENT

ಎಸ್‌ಎಂಸ್‌ ಮೂಲಕವೇ ‘ನಿಲ್’‌ ರಿಟರ್ನ್ಸ್

ಪಿಟಿಐ
Published 8 ಜೂನ್ 2020, 16:25 IST
Last Updated 8 ಜೂನ್ 2020, 16:25 IST

ನವದೆಹಲಿ: ಎಸ್‌ಎಂಎಸ್‌ ಮೂಲಕವೇನಿಲ್‌ ರಿಟರ್ನ್ಸ್‌ ಸಲ್ಲಿಸುವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ.

ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದನಿಲ್‌ ರಿಟರ್ನ್ಸ್‌ ಎಸ್‌ಎಂಎಸ್‌ ಅನ್ನು 14409ಗೆ ಕಳುಹಿಸಬೇಕು. ಒಟಿಪಿ ವ್ಯವಸ್ಥೆಯ ಮೂಲಕ ಅದರ ದೃಢೀಕರಣ ನಡೆಯಲಿದೆ.ಇದರಿಂದ 22 ಲಕ್ಷ ತೆರಿಗೆದಾರರಿಗೆ ಅನುಕೂಲವಾಗಲಿದೆ. ರಿಟರ್ನ್ಸ್‌ ಸಲ್ಲಿಸಲು ಜಾಲತಾಣಕ್ಕೆ ಲಾಗಿನ್‌ ಆಗುವ ರಗಳೆ ತಪ್ಪಲಿದೆ ಎಂದು ಹೇಳಿದೆ.

ಎಸ್‌ಎಂಎಸ್‌ ಮೂಲಕ ಜಿಎಸ್‌ಟಿಆರ್‌–3ಬಿಯಲ್ಲಿ ತಿಂಗಳ ನಿಲ್‌ ರಿಟರ್ನ್ಸ್‌‌ ಸಲ್ಲಿಸಬಹುದು ಎಂದು ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಐಸಿ) ತಿಳಿಸಿದೆ.

ADVERTISEMENT

ಯಾವುದೇ ಖರೀದಿ ವಹಿವಾಟು ನಡೆಸದೇ ಇದ್ದರೆ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಬೇಡಿಕೆ ಇಲ್ಲದಿದ್ದರೆ ಅಂತಹ ತೆರಿಗೆ ಪಾವತಿದಾರರು ‘ನಿಲ್‌’ ರಿಟರ್ನ್ಸ್‌ ತುಂಬಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.