ADVERTISEMENT

150 ಹೊಸ ಶಾಖೆಗಳನ್ನು ತೆರೆಯಲು ಮುತ್ತೂಟ್ ಫೈನಾನ್ಸ್‌ಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 16:14 IST
Last Updated 4 ಜುಲೈ 2022, 16:14 IST
   

ಬೆಂಗಳೂರು: ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಮುತ್ತೂಟ್‌ ಫೈನಾನ್ಸ್‌ಗೆ ದೇಶದಾದ್ಯಂತ ಹೊಸದಾಗಿ 150 ಶಾಖೆಗಳನ್ನು ಆರಂಭಿಸಲು ಆರ್‌ಬಿಐನಿಂದ ಅನುಮತಿ ದೊರೆತಿದೆ. ‘ಇದರಿಂದಾಗಿ ಕಂಪನಿಗೆ ಗ್ರಾಹಕರ ನೆಲೆಯನ್ನು ವಿಸ್ತರಿಸಿಕೊಳ್ಳಲು, ಬೆಳವಣಿಗೆ ಸಾಧಿಸಲು ಸಹಾಯ ಆಗಲಿದೆ’ ಎಂದು ಪ್ರಕಟಣೆ ತಿಳಿಸಿದೆ.

ಮುತ್ತೂಟ್ ಫೈನಾನ್ಸ್ ಕಂಪನಿಯು ಸರಿಸುಮಾರು ಮೂರು ವರ್ಷಗಳ ನಂತರದಲ್ಲಿ ಹೊಸ ಶಾಖೆಗಳನ್ನು ತೆರೆಯಲಿದೆ. ಬ್ಯಾಂಕಿಂಗ್ ಸೇವೆಗಳು ಹೆಚ್ಚಾಗಿ ಲಭ್ಯವಾಗದಿರುವ ಕಡೆಗಳಲ್ಲಿ ಈ ಶಾಖೆಗಳನ್ನು ತೆರೆಯಲಾಗುತ್ತದೆ. ಹೊಸ ಶಾಖೆ ಆರಂಭಿಸುವುದಕ್ಕಾಗಿ ಒಟ್ಟು 600 ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

‘ನಾವು ಈಗ 4,617 ಶಾಖೆಗಳನ್ನು ಹೊಂದಿದ್ದೇವೆ. ಇದರ ಜೊತೆ ಇನ್ನೂ 150 ಶಾಖೆಗಳು ಬರಲಿವೆ. ಹೊಸ ಶಾಖೆಗಳು ಮುಂದಿನ ಎರಡು ತಿಂಗಳುಗಳಲ್ಲಿ ಕೆಲಸ ಶುರುಮಾಡಬೇಕು ಎಂಬ ಉದ್ದೇಶ ಹೊಂದಿದ್ದೇವೆ’ ಎಂದು ಕಂಪನಿಯ ವ್ಯವಸ್ಥಾಪ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.