ADVERTISEMENT

ಈಕ್ವಿಟಿ ಮ್ಯೂಚುವಲ್‌ ಫಂಡ್‌ | ಒಳಹರಿವು ಶೇ 22ರಷ್ಟು ಇಳಿಕೆ: ಎಎಂಎಫ್‌ಐ

ಪಿಟಿಐ
Published 10 ಸೆಪ್ಟೆಂಬರ್ 2025, 15:58 IST
Last Updated 10 ಸೆಪ್ಟೆಂಬರ್ 2025, 15:58 IST
ಎಂ.ಎಫ್‌
ಎಂ.ಎಫ್‌   

ನವದೆಹಲಿ: ಆಗಸ್ಟ್‌ ತಿಂಗಳಿನಲ್ಲಿ ಈಕ್ವಿಟಿ ಆಧಾರಿತ ಮ್ಯೂಚುವಲ್‌ ಫಂಡ್‌ಗಳಿಗೆ (ಎಂ.ಎಫ್‌) ಹಣದ ಒಳಹರಿವಿನ ಪ್ರಮಾಣ ಶೇ 22ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಬುಧವಾರ ತಿಳಿಸಿದೆ.

ಜುಲೈ ತಿಂಗಳಿನಲ್ಲಿ ₹42,702 ಕೋಟಿ ಒಳಹರಿವಾಗಿತ್ತು. ಆಗಸ್ಟ್‌ನಲ್ಲಿ ₹33,430 ಕೋಟಿ ಹೂಡಿಕೆಯಾಗಿದೆ ಎಂದು ತಿಳಿಸಿದೆ. ಒಳಹರಿವು ₹9 ಸಾವಿರ ಕೋಟಿಯಷ್ಟು ಕಡಿಮೆ ಆಗಿದೆ.

ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (ಎಸ್‌ಐಪಿ) ಹೂಡಿಕೆ ಪ್ರಮಾಣ ಸ್ವಲ್ಪ ಇಳಿಕೆಯಾಗಿದ್ದು, ₹28,265 ಕೋಟಿ ಒಳಹರಿವಾಗಿದೆ. ಜುಲೈನಲ್ಲಿ ₹28,464 ಕೋಟಿ ಹೂಡಿಕೆಯಾಗಿತ್ತು ಎಂದು ತಿಳಿಸಿದೆ. 

ADVERTISEMENT

ನ್ಯೂ ಫಂಡ್ ಆಫರ್ (ಎನ್‌ಎಫ್‌ಒ) ಪ್ರಮಾಣದಲ್ಲಿ ಇಳಿಕೆ ಆಗಿರುವುದು ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಒಳಹರಿವಿನ ಇಳಿಕೆಗೆ ಕಾರಣವಾಗಿವೆ. ಅಲ್ಲದೆ, ಅಮೆರಿಕದ ಹೆಚ್ಚಿನ ಸುಂಕ ಹೇರಿಕೆಯು ಸಹ ಒಳಹರಿವು ಇಳಿಕೆಗೆ ಕಾರಣವಾಯಿತು ಎಂದು ತಜ್ಞರು ತಿಳಿಸಿದ್ದಾರೆ.

ಚಿನ್ನದ ಇಟಿಎಫ್‌ಗಳಲ್ಲಿ ಒಳಹರಿವು ಜುಲೈನಲ್ಲಿ ₹1,256 ಕೋಟಿಯಷ್ಟಿತ್ತು. ಇದು ಆಗಸ್ಟ್‌ನಲ್ಲಿ ₹2,190 ಕೋಟಿ ಹೂಡಿಕೆ ಸ್ವೀಕರಿಸಿದೆ ಎಂದು ತಿಳಿಸಿದೆ. ಒಟ್ಟಾರೆಯಾಗಿ, ಮ್ಯೂಚುವಲ್ ಫಂಡ್ ಉದ್ಯಮವು ಆಗಸ್ಟ್‌ನಲ್ಲಿ ಒಟ್ಟು ₹52,443 ಕೋಟಿ ಒಳಹರಿವು ಸ್ವೀಕರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.