ADVERTISEMENT

‘ಎಂಎಫ್‌’ ಸಂಪತ್ತು ವೃದ್ಧಿ

ಪಿಟಿಐ
Published 18 ಸೆಪ್ಟೆಂಬರ್ 2019, 20:00 IST
Last Updated 18 ಸೆಪ್ಟೆಂಬರ್ 2019, 20:00 IST

ಮುಂಬೈ: ದೇಶದ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ನಿರ್ವಹಣಾ ಸಂಪತ್ತಿನ ಮೌಲ್ಯ 2019ರ ಆಗಸ್ಟ್‌ನಲ್ಲಿ ಶೇ 4ರಷ್ಟು ಹೆಚ್ಚಾಗಿದ್ದು ₹ 25.47 ಲಕ್ಷ ಕೋಟಿಗೆ ಏರಿಕೆಯಾಗಿದೆ.

2019ರ ಜುಲೈನಲ್ಲಿ ನಿರ್ವಹಣಾ ಸಂಪತ್ತಿನ ಮೌಲ್ಯ ₹ 24.53 ಲಕ್ಷ ಕೋಟಿಗಳಷ್ಟಿತ್ತು ಎಂದು ಕೇರ್ ರೇಟಿಂಗ್ಸ್‌ ಸಂಸ್ಥೆ ಮಾಹಿತಿ ನೀಡಿದೆ.

2019–20ನೇ ಹಣಕಾಸು ವರ್ಷದ ಮೊದಲ ಐದು ತಿಂಗಳಿನಲ್ಲಿ ಉದ್ಯಮದ ನಿರ್ವಹಣಾ ಸಂಪತ್ತು
₹ 1.68 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.ಎಂಎಫ್‌ಉದ್ಯಮಕ್ಕೆ ಸಣ್ಣ ನಗರಗಳ ಕೊಡುಗೆಯು ಆಗಸ್ಟ್‌ನಲ್ಲಿ ಶೇ 15.3ರಷ್ಟಿದ್ದು, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಮತ್ತು ಕರ್ನಾಟಕ ನಂತರದ ಎರಡು ಸ್ಥಾನದಲ್ಲಿವೆ.

ADVERTISEMENT

ಸಣ್ಣ ನಗರಗಳ ಕೊಡುಗೆ ಜುಲೈನಲ್ಲಿ ಶೇ 15.49ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.