ADVERTISEMENT

ಕೋವಿಡ್: ಬೆಲೆ ತಗ್ಗಿಸದವರ ವಿರುದ್ಧ ಸಾಕ್ಷ್ಯ ಕಲೆಹಾಕಲು ಸೂಚನೆ

ಪಿಟಿಐ
Published 24 ಜೂನ್ 2021, 16:55 IST
Last Updated 24 ಜೂನ್ 2021, 16:55 IST

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಚಿಕಿತ್ಸೆಯಲ್ಲಿ ಬಳಸುವ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಿರದ ಪೂರೈಕೆದಾರರ ವಿರುದ್ಧ ಸಾಕ್ಷ್ಯ ಕಲೆಹಾಕುವಂತೆ ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರವು (ಎನ್‌ಎಎ) ತೆರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈಚೆಗೆ ನಡೆದ ಜಿಎಸ್‌ಟಿ ಮಂಡಳಿ ಸಭೆಯು, ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಕೆಲವು ಅಗತ್ಯ ವಸ್ತುಗಳು, ಔಷಧಗಳ ಮೇಲಿನ ತೆರಿಗೆ ಪ್ರಮಾಣವನ್ನು ತಗ್ಗಿಸಿದೆ. ತೆರಿಗೆ ಪ್ರಮಾಣದಲ್ಲಿ ಆಗಿರುವ ಇಳಿಕೆಗೆ ತಕ್ಕಂತೆ ಪೂರೈಕೆದಾರರು ವಸ್ತುಗಳ ಬೆಲೆಯನ್ನು ತಗ್ಗಿಸಬೇಕು ಎಂದು ಎನ್‌ಎಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT