ADVERTISEMENT

ಅಮೆಜಾನ್ ಅರ್ಜಿ ತಿರಸ್ಕೃತ

ಪಿಟಿಐ
Published 13 ಜೂನ್ 2022, 16:28 IST
Last Updated 13 ಜೂನ್ 2022, 16:28 IST

ನವದೆಹಲಿ (ಪಿಟಿಐ): ಅಮೆಜಾನ್ ಕಂಪನಿಯು ತಾನು ಫ್ಯೂಚರ್ ಸಮೂಹದ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಅಮಾನತುಗೊಳಿಸಿದ ಕೇಂದ್ರ ಸ್ಪರ್ಧಾ ಆಯೋಗದ (ಸಿಸಿಐ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ತಿರಸ್ಕರಿಸಿದೆ.

ಅಮೆಜಾನ್ ಮೇಲೆ ಸಿಸಿಐ ವಿಧಿಸಿದ್ದ ₹ 200 ಕೋಟಿ ದಂಡವನ್ನು ಎನ್‌ಸಿಎಲ್‌ಎಟಿ ಎತ್ತಿಹಿಡಿದಿದೆ. ಈ ಮೊತ್ತವನ್ನು 45 ದಿನಗಳಲ್ಲಿ ಪಾವತಿಸಬೇಕು ಎಂದು ಸೂಚಿಸಿದೆ. ಫ್ಯೂಚರ್ ರಿಟೇಲ್‌ನ ಅಂಗಸಂಸ್ಥೆಯಾಗಿರುವ ಫ್ಯೂಚರ್ ಕೂಪನ್ಸ್ ಪ್ರೈ.ಲಿ. ಜೊತೆ ಮಾಡಿಕೊಂಡಿದ್ದ ಒಪ್ಪಂದದ ಕುರಿತು ಪೂರ್ಣ ಮಾಹಿತಿಯನ್ನು ಅಮೆಜಾನ್ ನಿಡಿರಲಿಲ್ಲ ಎಂದು ಸಿಸಿಐ ಹೇಳಿದ್ದನ್ನು ಕೂಡ ಎನ್‌ಸಿಎಲ್‌ಎಟಿ ಎತ್ತಿಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT