ADVERTISEMENT

ನೆಫ್ರೊಪ್ಲಸ್‌ ಸ್ವಾಧೀನಕ್ಕೆ ಡವಿಟಾ ಕೇರ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 17:46 IST
Last Updated 9 ಡಿಸೆಂಬರ್ 2018, 17:46 IST

ಬೆಂಗಳೂರು: ಡಯಾಲಿಸಿಸ್‌ ಸೇವೆ ಒದಗಿಸುವ ದೇಶದ ಅತಿದೊಡ್ಡ ಸಂಸ್ಥೆ ನೆಫ್ರೊಪ್ಲಸ್‌, ಭಾರತದಲ್ಲಿನ ಅಮೆರಿಕದ ಡವಿಟಾ ಕೇರ್‌ ಇಂಡಿಯಾ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ.

ಬೆಂಗಳೂರು, ಪುಣೆ ಮತ್ತು ದೆಹಲಿಯಲ್ಲಿನ 22 ಡಯಾಲಿಸಿಸ್‌ ಕೇಂದ್ರಗಳು ಈಗ ನೆಫ್ರೊಪ್ಲಸ್ ವ್ಯಾಪ್ತಿಗೆ ಬಂದಿವೆ.

‘ಈ ಸ್ವಾಧೀನದಿಂದ 97 ನಗರಗಳಲ್ಲಿ ಸೇವಾ ಸೌಲಭ್ಯ ವಿಸ್ತರಣೆಗೊಂಡಿದೆ. ಬೆಂಗಳೂರಿನಲ್ಲಿ 3 ಕೇಂದ್ರಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿವೆ’ ಎಂದು ನೆಫ್ರೊಪ್ಲಸ್‌ನ ಸಿಇಒ ವಿಕ್ರಂ ಉಪ್ಪಳ ತಿಳಿಸಿದ್ದಾರೆ.

ADVERTISEMENT

ನೆಫ್ರೊಪ್ಲಸ್‌ನ ಪ್ರತಿಯೊಂದು ಕೇಂದ್ರದಲ್ಲಿ ಸರಾಸರಿ 12ರಿಂದ 15 ಡಯಾಲಿಸಿಸ್‌ ಯಂತ್ರಗಳು ಇರುತ್ತವೆ. ತಿರುಪತಿಯಲ್ಲಿನ ಏಷ್ಯಾದಲ್ಲಿಯೇ ಅತಿದೊಡ್ಡದಾದ 100 ಹಾಸಿಗೆಗಳ ಡಯಾಲಿಸಿಸ್‌ ಕೇಂದ್ರವನ್ನು ಈ ಸಂಸ್ಥೆಯೇ ನಿರ್ವಹಿಸುತ್ತಿದೆ. ಒಟ್ಟಾರೆ 176 ಕೇಂದ್ರಗಳನ್ನು ಹೊಂದುವ ಮೂಲಕ ಏಷ್ಯಾದಲ್ಲಿಯೇ ಅತಿದೊಡ್ಡ ಮತ್ತು ವಿಶ್ವದ 7ನೇ ಅತಿದೊಡ್ಡ ಡಯಾಲಿಸಿಸ್‌ ಸೇವಾ ಸಂಸ್ಥೆಯಾಗಲಿದೆ.

ಸಂಸ್ಥೆಯು ‘ಆಶಾಯೇ ಕಿಡ್ನಿ ಫೌಂಡೇಷನ್’ ಮೂಲಕ ಸರ್ಕಾರಿ ಪಾಲುದಾರಿಕೆಯಡಿ ಆರ್ಥಿಕವಾಗಿ ದುರ್ಬಲರಾದವರಿಗೆ ಸಬ್ಸಿಡಿ ದರದಲ್ಲಿ ಡಯಾಲಿಸಿಸ್‌ ಸೇವೆ ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.