ADVERTISEMENT

ಟ್ವಿಟರ್‌ನ ಪುನರ್‌ರಚನೆಗೆ ಕೈ ಹಾಕಿದ ಅಗರವಾಲ್‌: ಇಬ್ಬರ ಪದತ್ಯಾಗ 

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 10:55 IST
Last Updated 4 ಡಿಸೆಂಬರ್ 2021, 10:55 IST
ಪರಾಗ್‌ ಅಗರವಾಲ್‌
ಪರಾಗ್‌ ಅಗರವಾಲ್‌   

ನವದೆಹಲಿ: ಟ್ವಿಟರ್‌ನ ಹೊಸ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪರಾಗ್ ಅಗರವಾಲ್ ಅವರು ಕಂಪನಿಯನ್ನು ಪುನರ್‌ರಚಿಸಲು ಪ್ರಾರಂಭಿಸಿದ್ದಾರೆ. ಇದರ ಭಾಗವಾಗಿ ಕಂಪನಿಯ ಇಬ್ಬರು ಹಿರಿಯ ಅಧಿಕಾರಿಗಳು ಈಗಾಗಲೇ ತಮ್ಮ ಸ್ಥಾನಗಳಿಂದ ಕೆಳಗಿಳಿದ್ದಾರೆ.

2019 ರಲ್ಲಿ ಕಂಪನಿಗೆ ಸೇರಿದ ಟ್ವಿಟರ್‌ನ ಮುಖ್ಯ ವಿನ್ಯಾಸ ಅಧಿಕಾರಿ ಡಾಂಟ್ಲಿ ಡೇವಿಸ್ ಮತ್ತು 2011 ರಲ್ಲಿ ಕಂಪನಿ ಸೇರಿದ್ದ ಎಂಜಿನಿಯರಿಂಗ್ ಮುಖ್ಯಸ್ಥ ಮೈಕೆಲ್ ಮೊಂಟಾನೊ ಅವರು ಟ್ವಿಟರ್‌ ತೊರೆದಿದ್ದಾರೆ ಎಂದು ದಿ ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

'ಡಾಂಟ್ಲಿ ಅವರ ನಿರ್ಗಮನವು ಪ್ರಮುಖ ವ್ಯವಸ್ಥಾಪಕರನ್ನು ಹೊಂದುವ ರಚನೆಯನ್ನು ಕೇಂದ್ರಿಕರಿಸಿದೆ," ಎಂದು ಟ್ವಿಟರ್ ವಕ್ತಾರರು ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ಕಂಪನಿಯು ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸು ತನ್ನ ಕಾರ್ಯತಂತ್ರವನ್ನು ನವೀಕರಿಸಿದೆ ಎಂದು ಅಗರವಾಲ್ ಆಂತರಿಕವಾಗಿ ಹೇಳಿಕೊಂಡಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.