ADVERTISEMENT

ವರ್ಷಕ್ಕೆರಡು ಡಿವಿಡೆಂಡ್‌ ಖಾತರಿ

ಪಿಟಿಐ
Published 10 ಮಾರ್ಚ್ 2021, 17:03 IST
Last Updated 10 ಮಾರ್ಚ್ 2021, 17:03 IST

ನವದೆಹಲಿ: ಕೇಂದ್ರ ಸರ್ಕಾರದ ಮಾಲೀಕತ್ವದ ಕಂಪನಿಗಳಿಗೆ ಅನ್ವಯ ಆಗುವಂತೆ ಹೊಸ ನೀತಿಯೊಂದು ಜಾರಿಗೆ ಬಂದಿದೆ. ಈ ನೀತಿಯ ಪ್ರಕಾರ, ಕೇಂದ್ರ ಸರ್ಕಾರದ ಕಂಪನಿಗಳು ಷೇರುದಾರರಿಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಡಿವಿಡೆಂಡ್‌ ಪಾವತಿಸಬೇಕು.

‘ಡಿವಿಡೆಂಡ್‌ ಕೊಡುವುದರಲ್ಲಿ ಸ್ಥಿರತೆ ಇರಬೇಕು ಎನ್ನುವ ನೀತಿಯನ್ನು ನಾವು ಪ್ರಕಟಿಸಿದ್ದೇವೆ. ಡಿವಿಡೆಂಡ್‌ ಪಾವತಿಸಲು ವರ್ಷದ ಕೊನೆಯವರೆಗೂ ಕಾಯಬೇಕಿಲ್ಲ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ‍ಪಾಂಡೆ ಹೇಳಿದ್ದಾರೆ.

ಹಾಲಿ ಆರ್ಥಿಕ ವರ್ಷದಲ್ಲಿ ಕೂಡ ಹಲವು ಕಂಪನಿಗಳು ಮಧ್ಯಂತರ ಡಿವಿಡೆಂಡ್ ನೀಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.