ನವದೆಹಲಿ: ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ ಯೋಜನೆ ಅಭಿವೃದ್ಧಿಪಡಿಸಲು ಗ್ರೀನ್ ಬಾಂಡ್ ಹಂಚಿಕೆ ಮೂಲಕ ₹1 ಸಾವಿರ ಕೋಟಿ ಸಂಗ್ರಹಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ.
ಪರಿಸರ ಸ್ನೇಹಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಗ್ರೀನ್ ಬಾಂಡ್ ಬಳಸಲಾಗುತ್ತದೆ. ಮೂಲ ಹಂಚಿಕೆ ಗಾತ್ರ ₹500 ಕೋಟಿಯಾಗಿದೆ. ಜೊತೆಗೆ, ಹೆಚ್ಚಿನ ಚಂದಾದಾರಿಕೆ ಮೂಲಕ ₹500 ಕೋಟಿ ಸಂಗ್ರಹಿಸಲಾಗುವುದು ಎಂದು ಗುರುವಾರ ತಿಳಿಸಿದೆ.
ಡಿಸೆಂಬರ್ 2ನೇ ವಾರದಲ್ಲಿ ಹಂಚಿಕೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಮೊತ್ತವನ್ನು ರಸ್ತೆ ಬದಿ ಮತ್ತು ಮಧ್ಯದಲ್ಲಿ ಸಸಿ ನೆಡುವುದು, ಪ್ರಾಣಿಗಳ ಸಂಚಾರಕ್ಕೆ ಸುರಂಗ ರಸ್ತೆ ನಿರ್ಮಾಣ, ಮಳೆ ನೀರಿಗೆ ಚರಂಡಿ ನಿರ್ಮಿಸುವಿಕೆ, ಸೋಲಾರ್ ಬೀದಿ ದೀಪ ಅಳವಡಿಕೆ, ತ್ಯಾಜ್ಯ ಮರುಬಳಕೆ ಮತ್ತು ಮಳೆ ನೀರು ಸಂಗ್ರಹ ಕಾರ್ಯಕ್ಕೆ ಈ ನಿಧಿ ಬಳಸಿಕೊಳ್ಳಲಾಗುವುದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.