ADVERTISEMENT

ಸತತ 21 ದಿನಗಳ ಇಂಧನ ದರ ಏರಿಕೆಗೆ ಇಂದು ತಡೆ 

ಏಜೆನ್ಸೀಸ್
Published 28 ಜೂನ್ 2020, 1:28 IST
Last Updated 28 ಜೂನ್ 2020, 1:28 IST
ಪೆಟ್ರೋಲ್‌ ಡೀಸೆಲ್‌ ದರ ಪರಿಷ್ಕರಣೆಯನ್ನು ನಮೂದಿಸುತ್ತಿರುವ ಪೆಟ್ರೋಲ್‌ ಬಂಕ್‌ವೊಂದರ ಸಿಬ್ಬಂದಿ (ಸಂಗ್ರಹ ಚಿತ್ರ) /–ಪಿಟಿಐ
ಪೆಟ್ರೋಲ್‌ ಡೀಸೆಲ್‌ ದರ ಪರಿಷ್ಕರಣೆಯನ್ನು ನಮೂದಿಸುತ್ತಿರುವ ಪೆಟ್ರೋಲ್‌ ಬಂಕ್‌ವೊಂದರ ಸಿಬ್ಬಂದಿ (ಸಂಗ್ರಹ ಚಿತ್ರ) /–ಪಿಟಿಐ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯ ಸತತ ಏರಿಕೆಗೆ ಇಂದು ತಡೆ ಬಿದ್ದಿದೆ.

21 ದಿನಗಳ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಹೆಚ್ಚಳವಾಗಿಲ್ಲ.

ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹80.38 ಆಗಿದ್ದರೆ, ಡೀಸೆಲ್‌ ದರ ಲೀಟರ್‌ಗೆ ₹80.40 ಆಗಿದೆ.

ADVERTISEMENT

ಕೋವಿಡ್–19 ಸೋಂಕು ಭೀತಿಯಿಂದಾಗಿ ಜಾರಿಯಲ್ಲಿದ್ದ ಲಾಕ್‌ಡೌನ್‌ ಸಡಿಲಿಕೆ ಬಳಿಕ ಜೂನ್‌ 7ರಿಂದ ಇಂಧನ ದರ ಪರಿಷ್ಕರಣೆ ಆರಂಭಿಸಲಾಗಿದೆ. ಅಂದಿನಿಂದಲೂ ತೈಲ ಬೆಲೆ ಏರುಗತಿಯಲ್ಲಿ ಸಾಗಿತ್ತು. ಆದರೆ, ಭಾನುವಾರ ಅದಕ್ಕೆ ತಡೆ ಬಿದ್ದಿದೆ.

ಇದಕ್ಕೂ ಹಿಂದೆ ಜೂನ್‌ 24ರಂದು ಪೆಟ್ರೋಲ್‌ ದರ ಮಾತ್ರ ಏರಿಕೆಯಾಗಿರಲಿಲ್ಲ. ಅಂದು ಮೊದಲ ಬಾರಿಗೆ ದೇಶದಲ್ಲಿ ಡೀಸೆಲ್‌ ಬೆಲೆ ಪೆಟ್ರೋಲ್‌ ಬೆಲೆಗಿಂತಲೂ ಹೆಚ್ಚಾಗಿತ್ತು.

ದೇಶದಲ್ಲಿ ಲಾಕ್‌ಡೌನ್ ಜಾರಿಯಾಗುವ ಮೊದಲು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ ₹ 69.60 ಮತ್ತು ₹ 62.30 ಇತ್ತು.

ಇನ್ನು ಬೆಂಗಳೂರಿನಲ್ಲಿ ಇಂದು ಪೆಟ್ರೋಲ್‌ ದರ ಲೀಟರ್‌ಗೆ ₹82.99 ಆಗಿದ್ದರೆ, ಡೀಸೆಲ್‌ ದರ ₹76.45 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.