ADVERTISEMENT

ಬ್ಯಾಂಕ್‌ಗಳ ಎನ್‌ಪಿಎ ಹೆಚ್ಚಳ: ಬ್ಯಾಂಕ್‌ ಆಫ್ ಅಮೆರಿಕ ಅಂದಾಜು

ಪಿಟಿಐ
Published 5 ಮೇ 2020, 19:45 IST
Last Updated 5 ಮೇ 2020, 19:45 IST

ಮುಂಬೈ: 2020–21ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಶೇ 2ರಿಂದ ಶೇ 4ರಷ್ಟು ಹೆಚ್ಚಳಗೊಳ್ಳಲಿದೆ ಎಂದು ಬ್ಯಾಂಕ್‌ ಆಫ್ ಅಮೆರಿಕ ಅಂದಾಜಿಸಿದೆ.

ಆರ್ಥಿಕ ಉತ್ತೇಜನಾ ಕೊಡುಗೆ, ತೆರಿಗೆ ಸಂಗ್ರಹ ಹಾಗೂ ಷೇರು ವಿಕ್ರಯ ಮೊತ್ತದಲ್ಲಿನ ಕುಸಿತ ಹಾಗೂ ಬ್ಯಾಂಕ್‌ಗಳ ಪುನರ್ಧನ ಉದ್ದೇಶಕ್ಕೆ ಇತರ ಸಂಪನ್ಮೂಲಗಳನ್ನು ಹೆಚ್ಚಿಸುವ ಕಾರಣಗಳಿಗೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಕೂಡ ಶೇ 2ರಷ್ಟು ಏರಿಕೆಯಾಗಲಿದೆ.

ಬ್ಯಾಂಕ್‌ಗಳ ಪುನರ್ಧನ ಉದ್ದೇಶಕ್ಕೆ ₹ 52 ಸಾವಿರ ಕೋಟಿಗಳಿಂದ ₹ 1.12 ಲಕ್ಷ ಕೋಟಿ ಬೇಕಾಗಬಹುದು. ಈ ಭಾರಿ ಮೊತ್ತ ಭರಿಸಲು ಸರ್ಕಾರ ಪುನರ್ಧನ ಬಾಂಡ್‌ ಬಿಡುಗಡೆ ಮಾಡಬೇಕಾದೀತು. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಬಳಿ ಇರುವ ಹೆಚ್ಚುವರಿ ಹಣವನ್ನು ಬಳಸಬೇಕಾಗಬಹುದು ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.