ADVERTISEMENT

‘ನಿಫ್ಟಿ’: ಪ್ರಭಾವ ಬೀರದ ‘ಸೆಬಿ’ ಆದೇಶ

​ಪ್ರಜಾವಾಣಿ ವಾರ್ತೆ
Published 2 ಮೇ 2019, 21:30 IST
Last Updated 2 ಮೇ 2019, 21:30 IST
nse
nse   

ನವದೆಹಲಿ: ಸಂಪರ್ಕ ಜಾಲದ ಸೇವೆ ಬಳಕೆಯಲ್ಲಿ ಎಲ್ಲ ದಲ್ಲಾಳಿಗಳಿಗೆ ಸಮಾನ ಅವಕಾಶ ಕೊಡಲು ವಿಫಲವಾದ ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಮೇಲೆ ‘ಸೆಬಿ’ ವಿಧಿಸಿದ ದಂಡವು ಅದರ ಕಾರ್ಯನಿರ್ವಹಣೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ.

ಮಾನ್ಯತೆ ಪಡೆದ ಷೇರುಪೇಟೆಯಾಗಿರುವುದರಿಂದ ‘ಸೆಬಿ’ ಆದೇಶವು ವಹಿವಾಟಿಗೆ ಅಡ್ಡಿಪಡಿಸಿಲ್ಲ ಎಂದು ‘ನಿಫ್ಟಿ’ ತಿಳಿಸಿದೆ.

ದೇಶದ ಅತಿದೊಡ್ಡ ಷೇರು ಪೇಟೆಯಾಗಿರುವ ‘ನಿಫ್ಟಿಯಲ್ಲಿ ವ್ಯವಹರಿಸುವ ಸಣ್ಣ ಪ್ರಮಾಣದ ಸಂಸ್ಥೆಗಳಿಗೆ ಅಗತ್ಯವಾದ ದುಬಾರಿ ಸಂಪರ್ಕ ಜಾಲದ ಸೇವೆಯನ್ನು ಕಡಿಮೆ ದರದಲ್ಲಿ ಬಾಡಿಗೆಗೆ ಒದಗಿಸಲಾಗುತ್ತಿದೆ. ಪೇಟೆಯಲ್ಲಿ ಸ್ವಯಂಚಾಲಿತ ವಹಿವಾಟು ತ್ವರಿತವಾಗಿ ನಡೆಯಲು ಈ ಸಂಪರ್ಕ ಜಾಲದ ಸೇವೆ ಪಡೆಯಲಾಗುತ್ತಿದೆ. ಈ ಸೇವೆ ಪಡೆದುಕೊಳ್ಳಲು ಎಲ್ಲ ದಲ್ಲಾಳಿಗಳಿಗೆ ಸಮಾನ ಅವಕಾಶ ನೀಡದ ಕಾರಣ ಭಾರತೀಯ ಷೇರು ನಿಯಂತ್ರಣ ಮಂಡಳಿಯು (ಸೆಬಿ) ₹ 1,000 ಕೋಟಿ ದಂಡ ವಿಧಿಸಿದೆ. ಪೇಟೆಯ ಹಾಲಿ ಮತ್ತು ಮಾಜಿ ಉನ್ನತ ಅಧಿಕಾರಿಗಳು ಮತ್ತು ಕೆಲ ಷೇರು ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ADVERTISEMENT

‘ಸೆಬಿ’ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೂ ಮುಂಚೆ ಕಾನೂನು ಸಲಹೆ ಪಡೆಯುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ‘ನಿಫ್ಟಿ’ ತಿಳಿಸಿದೆ.ಮೇಲ್ಮನವಿ ಹೋಗುವುದರಿಂದ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹಣ ಸಂಗ್ರಹಿಸುವ ಉದ್ದೇಶ ವಿಳಂಬವಾಗಲಿದೆ. ಈ ಕಾರಣಕ್ಕೆ ಮೇಲ್ಮನವಿ ಸಲ್ಲಿಸಬಾರದು ಎಂದು ‘ಎನ್‌ಎಸ್‌ಇ’ಯಲ್ಲಿನ ವಿದೇಶಿ ಹೂಡಿಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.