ADVERTISEMENT

2021-22ರಲ್ಲಿ 7.14 ಕೋಟಿ ಐಟಿಆರ್‌ ಸಲ್ಲಿಕೆ

ಸಿಬಿಡಿಟಿ ಅಧ್ಯಕ್ಷೆ ಸಂಗೀತಾ ಮಾಹಿತಿ

ಪಿಟಿಐ
Published 11 ಜೂನ್ 2022, 13:43 IST
Last Updated 11 ಜೂನ್ 2022, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ: ‘ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಲ್ಲಿ (ಐಟಿಆರ್‌) ಏರಿಕೆ ಆಗುತ್ತಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಧ್ಯಕ್ಷೆ ಸಂಗೀತಾ ಸಿಂಗ್‌ ಶನಿವಾರ ತಿಳಿಸಿದ್ದಾರೆ

‘2020–21ನೇ ಹಣಕಾಸು ವರ್ಷದಲ್ಲಿ 6.9 ಕೋಟಿ ಐಟಿಆರ್‌ ಸಲ್ಲಿಕೆ ಆಗಿತ್ತು. 2021–22ನೇ ಹಣಕಾಸು ವರ್ಷದಲ್ಲಿ 7.14 ಕೋಟಿಗೆ ಏರಿಕೆ ಆಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ತೆರಿಗೆ ಪಾವತಿದಾರರ ಸಂಖ್ಯೆ ಮತ್ತು ಪರಿಷ್ಕೃತ ರಿಟರ್ನ್ಸ್‌ ಸಲ್ಲಿಸುವವರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಆರ್ಥಿಕತೆಯು ಬೆಳವಣಿಗೆ ಕಾಣುತ್ತಿದ್ದರೆ ತೆರಿಗೆ ಸಂಗ್ರಹವೂ ಹೆಚ್ಚಾಗುತ್ತದೆ. ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರೆತಂತೆ ಖರೀದಿ ಮತ್ತು ಮಾರಾಟದಲ್ಲಿ ಏರಿಕೆ ಆಗುತ್ತದೆ ಎಂದಿದ್ದಾರೆ.

ADVERTISEMENT

‘2021–22ರಲ್ಲಿ ಸಂಗ್ರಹ ಆಗಿರುವ ತೆರಿಗೆ ಮೊತ್ತವು ಅದಕ್ಕೂ ಹಿಂದಿನ ಹಣಕಾಸು ವರ್ಷಕ್ಕಿಂತ ₹ 14 ಲಕ್ಷ ಕೋಟಿ ಹೆಚ್ಚಿಗೆ ಇದೆ’ ಎಂದು ಮಾಹಿತಿ ನೀಡಿದ್ದಾರೆ.

‘ಡಿಜಿಟಲ್‌ ಇಂಡಿಯಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಕ್ರಮಗಳಿಂದಾಗಿಯೂ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ಡಿಜಿಟಲ್ ಪಾವತಿಗೆ ಹೆಚ್ಚು ಗಮನ ಹರಿಸಿದರು. ಇದರಿಂದಾಗಿ ಡಿಜಿಟಲ್‌ ಪಾವತಿಯ ಬಗ್ಗೆ ಜನರ ಮನೋಭಾವ ಬದಲಾಯಿತು. ಸಕಾಲಕ್ಕೆ ತೆರಿಗೆ ಪಾವತಿಸುವ ಕುರಿತು ಜನರಿಗೆ ತಿಳವಳಿಕೆ ಮೂಡಿಸಿರುವುದು ಸಹ ತೆರಿಗೆ ಸಂಗ್ರಹದಲ್ಲಿ ಏರಿಕೆಗೆ ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.