ADVERTISEMENT

ಬೆಂಗಳೂರು: ಕಚೇರಿ ಗುತ್ತಿಗೆಗೆ ನೆಚ್ಚಿನ ನಗರ

2019ರ ಮೊದಲ ತ್ರೈಮಾಸಿಕ: ಸಿಬಿಆರ್‌ಇ ವರದಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 20:15 IST
Last Updated 19 ಏಪ್ರಿಲ್ 2019, 20:15 IST
   

ಬೆಂಗಳೂರು:2019ರ ಮೊದಲ ತ್ರೈಮಾಸಿಕದಲ್ಲಿ ಗುತ್ತಿಗೆಗೆ ಕಚೇರಿ ಪಡೆಯುವವರಿಗೆ ಬೆಂಗಳೂರು ನೆಚ್ಚಿನ ನಗರವಾಗಿದೆ ಎಂದುಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್‌ಇ ಸೌತ್‌ ಏಷ್ಯಾ ಪ್ರೈವೇಟ್‌ ಲಿಮಿಟೆಡ್‌ ಹೇಳಿದೆ‌.

ಭಾರತದ ಕಚೇರಿ ಮಾರುಕಟ್ಟೆಯ ಮೊದಲ ತ್ರೈಮಾಸಿಕದ ವರದಿಯಲ್ಲಿಬೆಂಗಳೂರು, ದೆಹಲಿ ರಾಜಧಾನಿ ಪ್ರದೇಶ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್‌, ಪುಣೆ, ಅಹ್ಮದಾಬಾದ್‌ ಮತ್ತು ಕೊಚ್ಚಿ ನಗರಗಳ ಕಚೇರಿ ಗುತ್ತಿಗೆ ಸ್ಥಳಾವಕಾಶದ ಮಾಹಿತಿಗಳನ್ನು
ನೀಡಿದೆ.

ಪ್ರಮುಖ 9 ನಗರಗಳಲ್ಲಿ ಕಚೇರಿ ಸ್ಥಳಾವಕಾಶ ಗುತ್ತಿಗೆ ಚಟುವಟಿಕೆಯು 2019ರ ಜನವರಿ–ಮಾರ್ಚ್‌ ಅವಧಿಯಲ್ಲಿ 1.28 ಕೋಟಿ ಚದರ ಅಡಿಗಳಷ್ಟು ಅಲ್ಪ ಪ್ರಗತಿಯನ್ನಷ್ಟೇ ಕಂಡಿದೆ.

ADVERTISEMENT

ಮುಂಚೂಣಿಗೆ ಹೈದರಾಬಾದ್: ಇದೇ ಮೊದಲ ಬಾರಿಗೆ ಕಚೇರಿ ಮಾರುಕಟ್ಟೆಯಲ್ಲಿ ಹೈದರಾಬಾದ್‌, ಬೆಂಗಳೂರು ನಗರವನ್ನು ಹಿಂದಿಕ್ಕಿದೆ.

ಒಟ್ಟಾರೆ ಕಚೇರಿ ಸ್ಥಳಾವಕಾಶದ ಬೇಡಿಕೆಯಲ್ಲಿ ತಂತ್ರಜ್ಞಾನ ಕಾರ್ಪೊರೇಟ್‌ ಸಂಸ್ಥೆಗಳ ಪ್ರಮಾಣ ಶೇ 33ರಷ್ಟಿದೆ. ಕೋವರ್ಕಿಂಗ್‌ ಆಪರೇಟರ್ಸ್‌ಗಳ ಪಾಲು ಶೇ 16ರಷ್ಟಿದೆ ಎಂದು ಭಾರತದ ಕಚೇರಿ ಮಾರುಕಟ್ಟೆ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.