ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್–ಪ್ರಾತಿನಿಧಿಕ ಚಿತ್ರ
ನವದೆಹಲಿ: ಆನ್‌ಲೈನ್‌ನಲ್ಲಿ ಹಣವನ್ನು ಪಣಕ್ಕೆ ಇಟ್ಟು ಆಡುವ ಆಟಗಳಲ್ಲಿ ಪ್ರತಿವರ್ಷ ಅಂದಾಜು 45 ಕೋಟಿ ಜನರು ₹20 ಸಾವಿರ ಕೋಟಿಯಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ.
ಹಣವನ್ನು ತೊಡಗಿಸಿ ಆಡುವ ಆನ್‌ಲೈನ್ ಆಟಗಳು ಸಮಾಜಕ್ಕೆ ದೊಡ್ಡ ಸಮಸ್ಯೆಯಾಗಿ ಬೆಳದಿವೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಂಡಿದೆ. ಹೀಗಾಗಿ ಅದು ಈ ಆಟಗಳಿಂದ ಬರುವ ವರಮಾನವನ್ನು ಬಿಟ್ಟುಕೊಟ್ಟು, ಜನರ ಒಳಿತನ್ನು ತನ್ನ ಆದ್ಯತೆಯನ್ನಾಗಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಣವನ್ನು ತೊಡಗಿಸಿ ಆನ್‌ಲೈನ್ ಮೂಲಕ ಆಡುವ ಆಟಗಳನ್ನು ನಿಷೇಧಿಸುವ ಮಸೂದೆಯನ್ನು ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದೆ.
ಹಣವನ್ನು ಕಟ್ಟಿ ಆಡಬೇಕಿರುವ ಕೆಲವು ಆನ್‌ಲೈನ್ ಆಟಗಳು ತಮ್ಮನ್ನು ‘ಕೌಶಲ ಆಧರಿಸಿದ ಆಟ’ ಎಂಬುದಾಗಿ ಬಿಂಬಿಸಿಕೊಳ್ಳುತ್ತಿವೆ. ಆದರೆ ಅವು ತಮ್ಮನ್ನು ಜೂಜು ಹಾಗೂ ಬೆಟ್ಟಿಂಗ್ ವ್ಯಾಪ್ತಿಯಿಂದ ಹೊರಗೆ ಇರಿಸಲು ಹೀಗೆ ಮಾಡುತ್ತಿವೆ. ಇಂತಹ ಆಟಗಳನ್ನು ಆಡುವವರು ಸಂತ್ರಸ್ತರು, ಅವರಿಗೆ ಹೊಸ ಮಸೂದೆಯು ಶಿಕ್ಷೆಯನ್ನು ನಿಗದಿ ಮಾಡುವುದಿಲ್ಲ. ಆದರೆ, ಇಂತಹ ಆಟಗಳಿಗೆ ವೇದಿಕೆ ಒದಗಿಸಿಕೊಡುವವರಿಗೆ ಹಾಗೂ ಹಣದ ವಹಿವಾಟಿನ ಸೇವೆಗಳನ್ನು ಒದಗಿಸಿಕೊಡುವವರ ವಿರುದ್ಧ ಕ್ರಮ ಆಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.