
ಪ್ರಜಾವಾಣಿ ವಾರ್ತೆ
ನವದೆಹಲಿ: 2021–22ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್) ಸಲ್ಲಿಸಲು ಭಾನುವಾರ (ಜುಲೈ 31) ಅಂತಿಮ ದಿನವಾಗಿದೆ.
ಗಡುವು ಮುಗಿಯುವುದಕ್ಕೂ ಮೊದಲೇ ಐಟಿಆರ್ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಯು ಟ್ವಿಟರ್ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಶನಿವಾರ ರಾತ್ರಿ 8.36ರ ವರೆಗಿನ ಮಾಹಿತಿಯ ಪ್ರಕಾರ, 5 ಕೋಟಿಗೂ ಅಧಿಕ ಐಟಿಆರ್ ಸಲ್ಲಿಕೆ ಆಗಿದೆ ಎಂದು ಮಾಹಿತಿ ನೀಡಿದೆ.
ಗಡುವು ವಿಸ್ತರಿಸುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಬೇಡಿಕೆ ಇಡಲಾಗುತ್ತಿದೆ. ಸಿಬಿಡಿಟಿಗೂ ಮನವಿ ಪತ್ರಗಳು ಬಂದಿವೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ‘ರಿಟರ್ನ್ಸ್ ಸಲ್ಲಿಕೆಯು ಈವರೆಗೂ ಸುಗಮವಾಗಿ ನಡೆಯುತ್ತಿದೆ. ಬೇರೆ ಯಾವುದೇ ಆಲೋಚನೆಯೂ ಸದ್ಯಕ್ಕೆ ಇಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.