
ಪಿಟಿಐ
ಪಾನ್ ಮಸಾಲಾ, ಗುಟ್ಕಾ ( ಸಾಂಕೇತಿಕ ಚಿತ್ರ)
ನವದೆಹಲಿ: ಪಾನ್ ಮಸಾಲಾ ಪೊಟ್ಟಣಗಳ ಮೇಲೆ ಚಿಲ್ಲರೆ ಮಾರಾಟ ದರವನ್ನು (ಆರ್‌ಎಸ್‌ಪಿ) ನಮೂದು ಮಾಡುವುದು ಕಡ್ಡಾಯ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೇಳಿದೆ.
ಪೊಟ್ಟಣಗಳ ಗಾತ್ರ ಯಾವುದೇ ಇರಲಿ, ಅದರಲ್ಲಿ ಇರುವ ಉತ್ಪನ್ನದ ತೂಕ ಎಷ್ಟೇ ಇರಲಿ, ಆರ್‌ಎಸ್‌ಪಿ ಹಾಗೂ ‘ಕಾನೂನು ಮಾಪನಶಾಸ್ತ್ರ (ಪೊಟ್ಟಣದಲ್ಲಿನ ಸರಕುಗಳು) ನಿಯಮ–2011’ರ ಅಡಿಯಲ್ಲಿ ಹೇಳಿರುವ ಸಂಗತಿಗಳನ್ನು ನಮೂದು ಮಾಡುವುದು ಕಡ್ಡಾಯ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.
ಈ ಆದೇಶವು ಫೆಬ್ರುವರಿ 1ರಿಂದ ಅನ್ವಯವಾಗಲಿದೆ. 10 ಗ್ರಾಂ ಹಾಗೂ ಅದಕ್ಕಿಂತ ಕಡಿಮೆ ತೂಕದ ಪೊಟ್ಟಣಗಳಲ್ಲಿ ಕೆಲವು ವಿವರಗಳನ್ನು ನೀಡುವ ಅಗತ್ಯ ಇಲ್ಲ ಎಂದು ಈ ಹಿಂದೆ ವಿನಾಯಿತಿ ನೀಡಲಾಗಿತ್ತು. ಆದರೆ ಈಗಿನ ಆದೇಶವು ವಿನಾಯಿತಿಗಳನ್ನು ಇಲ್ಲವಾಗಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.