ADVERTISEMENT

ಅಸಮಾನತೆಯನ್ನು ತೋರಿಸಿಕೊಟ್ಟ ಸಾಂಕ್ರಾಮಿಕ: ಅಜೀಂ ಪ್ರೇಮ್‌ಜಿ

ಪಿಟಿಐ
Published 14 ಡಿಸೆಂಬರ್ 2020, 16:13 IST
Last Updated 14 ಡಿಸೆಂಬರ್ 2020, 16:13 IST

ನವದೆಹಲಿ: ಲಕ್ಷಾಂತರ ಜನರಿಗೆ ಕನಿಷ್ಠ ಘನತೆಯ ಜೀವನವನ್ನೂ ನಿರಾಕರಿಸುವ ಅಸಮಾನತೆಗಳನ್ನು, ಅನ್ಯಾಯಗಳನ್ನು ಕೋವಿಡ್–19 ಸಾಂಕ್ರಾಮಿಕವು ಭೂತಗನ್ನಡಿ ಹಾಕಿ ತೋರಿಸಿಕೊಟ್ಟಿದೆ ಎಂದು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಸೋಮವಾರ ಹೇಳಿದ್ದಾರೆ. ಸರ್ಕಾರಿ ವ್ಯವಸ್ಥೆಯ ಮೂಲಭೂತ ಪಾತ್ರ ಏನು ಎಂಬುದನ್ನೂ ಇದು ಸ್ಪಷ್ಟಪಡಿಸಿದೆ ಎಂದೂ ಅವರು ಹೇಳಿದ್ದಾರೆ.

ಪ್ರೇಮ್‌ಜಿ ಅವರ ಮಾತುಗಳನ್ನು ‘ಫಿಕ್ಕಿ’ಯ (ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ) 93ನೆಯ ವಾರ್ಷಿಕ ಮಹಾಸಭೆಯಲ್ಲಿ ಪ್ರಸಾರ ಮಾಡಲಾಯಿತು. ಸಾಂಕ್ರಾಮಿಕವು ದಿಗ್ಭ್ರಮೆ ಹುಟ್ಟಿಸುವ ರೀತಿಯಲ್ಲಿ ಮನುಷ್ಯನಿಗೆ ಸಂಕಷ್ಟಗಳನ್ನು ತಂದಿತ್ತಿದೆ. ಅರ್ಥ ವ್ಯವಸ್ಥೆಯು ಸಮಾಜದ ಒಂದು ಭಾಗ ಎಂಬುದನ್ನೂ ನೆನಪಿಸಿಕೊಟ್ಟಿದೆ. ಮನುಷ್ಯ ಎಲ್ಲ ರೀತಿಯಿಂದಲೂ ಚೆನ್ನಾಗಿರುವುದು ಮುಖ್ಯ ಎಂಬುದನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT