ADVERTISEMENT

ಕಾರ್ಮಿಕರ ಪಿಂಚಣಿ ಮೊತ್ತ: ವಿವರಣೆ ಕೇಳಲಿರುವ ಸ್ಥಾಯಿ ಸಮಿತಿ

ಪಿಟಿಐ
Published 3 ನವೆಂಬರ್ 2022, 15:49 IST
Last Updated 3 ನವೆಂಬರ್ 2022, 15:49 IST
   

ನವದೆಹಲಿ (ಪಿಟಿಐ): ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರ ಪಿಂಚಣಿ ಮೊತ್ತವನ್ನು ಈಗಿನ ₹1,000ಕ್ಕಿಂತ ಹೆಚ್ಚು ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು ಏಕೆ ಎಂದು ಸಂಸತ್ತಿನ ಸ್ಥಾಯಿ ಸಮಿತಿಯೊಂದು ಕೇಂದ್ರ ಹಣಕಾಸು ಸಚಿವಾಲಯದಿಂದ ವಿವರಣೆ ಕೇಳಲಿದೆ.

ಪಿಂಚಣಿ ಮೊತ್ತ ಹೆಚ್ಚಿಸುವಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಪ್ರಸ್ತಾವ ಸಲ್ಲಿಸಿತ್ತು. ಆದರೆ ಪಿಂಚಣಿ ಹೆಚ್ಚಳದ ‍‍ಪ್ರಸ್ತಾವ ಎಷ್ಟಿತ್ತು ಎಂಬುದು ಸ್ಪಷ್ಟವಾಗಿಲ್ಲ.

ಕಾರ್ಮಿಕ ಸಚಿವಾಲಯವು 1995ರ ನೌಕರರ ಪಿಂಚಣಿ ಯೋಜನೆಯನ್ನು (ಇಪಿಎಸ್‌) ಸಂಪೂರ್ಣವಾಗಿ ಪುನರ್‌ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.

ADVERTISEMENT

ಸದಸ್ಯರಿಗೆ ನೀಡುವ ಮಾಸಿಕ ಕನಿಷ್ಠ ಪಿಂಚಣಿಯ ಮೊತ್ತವು ₹ 2,000 ಇರಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.