ADVERTISEMENT

ಮಾರ್ಚ್‌ 24ರಿಂದ ರುಚಿ ಸೋಯಾ ಎಫ್‌ಪಿಒ

ಪಿಟಿಐ
Published 21 ಮಾರ್ಚ್ 2022, 12:53 IST
Last Updated 21 ಮಾರ್ಚ್ 2022, 12:53 IST

ಮುಂಬೈ: ಪತಂಜಲಿ ಆಯುರ್ವೇದ ಸಮೂಹದ ಒಡೆತನದಲ್ಲಿ ಇರುವ ರುಚಿ ಸೋಯಾ ಇಂಡಸ್ಟ್ರೀಸ್‌ನ ಹೆಚ್ಚುವರಿ ಷೇರು ವಿತರಿಸುವ (ಎಫ್‌ಪಿಒ) ಪ್ರಕ್ರಿಯೆಯು ಮಾರ್ಚ್ 24ರಿಂದ ಶುರುವಾಗಲಿದೆ. ಇದರಿಂದಾಗಿ, ದೇಶದ ಅತಿದೊಡ್ಡ ಅಡುಗೆ ಎಣ್ಣೆ ಕಂಪನಿಯಾದ ರುಚಿ ಸೋಯಾ, ದಿವಾಳಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರದಲ್ಲಿ ಮತ್ತೆ ಷೇರು ಮಾರುಕಟ್ಟೆ ಪ್ರವೇಶಿಸುವ ಮೊದಲ ಕಂಪನಿ ಆಗಲಿದೆ.

ರುಚಿ ಸೋಯಾ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಹಾಗೂ ಕಾರ್ಯನಿರ್ವಾಹಕೇತರ ಅಧ್ಯಕ್ಷ ಬಾಬಾ ರಾಮದೇವ್ ಅವರು ಎಫ್‌ಪಿಒ ವೇಳೆ ಕಂಪನಿಯ ಷೇರುಗಳ ಬೆಲೆ ₹ 615–650 ಆಗಿರುತ್ತದೆ ಎಂದು ಸೋಮವಾರ ಪ್ರಕಟಿಸಿದ್ದಾರೆ.

ಕಂಪನಿಯ ಮೇಲಿರುವ ₹ 3,300 ಕೋಟಿ ಸಾಲವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ರುಚಿ ಮತ್ತು ಪತಂಜಲಿ ಆಹಾರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡುವ ಗುರಿ ಇದೆ. ಬ್ರ್ಯಾಂಡೆಡ್ ಆಹಾರ, ಪೌಷ್ಟಿಕಾಂಶಭರಿತ ಆಹಾರ, ಅಡುಗೆ ಎಣ್ಣೆಗಳು, ಆರೋಗ್ಯ ವರ್ಧಕ ಉತ್ಪನ್ನಗಳ ಅಡಿ ಕಂಪನಿಯು ತನ್ನ ಉತ್ಪಾದನೆಗಳನ್ನು ಮಾರುಕಟ್ಟೆಗೆ ತರಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ದಿವಾಳಿ ಆಗಿದ್ದ ರುಚಿ ಸೋಯಾ ಕಂಪನಿಯನ್ನು, ಅದರ 22 ಅಡುಗೆ ಎಣ್ಣೆ ಘಟಕಗಳನ್ನು ಪತಂಜಲಿ ಕಂಪನಿಯು 2018ರ ಡಿಸೆಂಬರ್‌ನಲ್ಲಿ ಬಿಡ್ ಮೂಲಕ ಸ್ವಾಧೀನಕ್ಕೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.