ADVERTISEMENT

ರಷ್ಯಾದಲ್ಲಿ ಪೇಪಾಲ್‌ ಸೇವೆ ಸ್ಥಗಿತ

ರಾಯಿಟರ್ಸ್
Published 5 ಮಾರ್ಚ್ 2022, 19:28 IST
Last Updated 5 ಮಾರ್ಚ್ 2022, 19:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಷ್ಯಾದಲ್ಲಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಆನ್‌ಲೈನ್‌ ಪಾವತಿ ಸೇವೆಗಳನ್ನು ನೀಡುವ ಪೇಪಾಲ್ ಹೋಲ್ಡಿಂಗ್ಸ್‌ ಕಂಪನಿಯು ಶನಿವಾರ ತಿಳಿಸಿದೆ.

ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷ ತೀವ್ರ ಸ್ವರೂಪಕ್ಕೆ ತಲುಪಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಅದು ತಿಳಿಸಿದೆ. ‘ಸದ್ಯದ ಪರಿಸ್ಥಿತಿಯಲ್ಲಿ ನಾವು ರಷ್ಯಾದಲ್ಲಿ ಪೇಪಾಲ್‌ ಸೇವೆಗಳನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ಪೇಪಾಲ್‌ ಅಧ್ಯಕ್ಷ ಡಾನ್‌ ಶುಲ್ಮನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸುವಲ್ಲಿ ಕಂಪನಿಯು ಅಂತರರಾಷ್ಟ್ರೀಯ ಸಮುದಾಯದ ಪರವಾಗಿದೆ’ ಎಂದೂ ಅವರು ಹೇಳಿದ್ದಾರೆ. ‘ಕೆಲವು ಸಮಯದವರೆಗೆ ಹಣ ಪಡೆಯಲು ಅವಕಾಶ ನೀಡುವುದಾಗಿ’ ಪೇಪಾಲ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT