ADVERTISEMENT

ಪೇಟಿಎಂ ಐಪಿಒಗೆ ಸೆಬಿ ಒಪ್ಪಿಗೆ

ಪಿಟಿಐ
Published 22 ಅಕ್ಟೋಬರ್ 2021, 13:52 IST
Last Updated 22 ಅಕ್ಟೋಬರ್ 2021, 13:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಣಕಾಸು ಸೇವೆಗಳನ್ನು ಡಿಜಿಟಲ್ ವೇದಿಕೆಯ ಮೂಲಕ ಒದಗಿಸುತ್ತಿರುವ ಪೇಟಿಎಂ ಕಂಪನಿಗೆ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ₹ 16,600 ಕೋಟಿ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಶುಕ್ರವಾರ ಒಪ್ಪಿಗೆ ನೀಡಿದೆ.

ಕಂಪನಿಯು ಈ ತಿಂಗಳ ಅಂತ್ಯದ ಹೊತ್ತಿಗೆ ಷೇರು ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಷೇರುಪೇಟೆಯಲ್ಲಿ ನೋಂದಾಯಿತ ಆಗುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂಬ ಉದ್ದೇಶದಿಂದ ಕಂಪನಿಯು ಐಪಿಒ ಪೂರ್ವದ ಷೇರು ಮಾರಾಟ‍ಪ್ರಕ್ರಿಯೆಯನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಂಪನಿಯು ತನ್ನ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 1.47 ಲಕ್ಷ ಕೋಟಿಯಿಂದ ₹ 1.78 ಲಕ್ಷ ಕೋಟಿವರೆಗೆ ಇರಬಹುದು ಎಂದು ಅಂದಾಜು ಮಾಡಿದೆ. ಕಂಪನಿಗಳ ಮೌಲ್ಯವನ್ನು ಲೆಕ್ಕಹಾಕುವಲ್ಲಿ ಪರಿಣತಿ ಹೊಂದಿರುವ ಅಮೆರಿಕ ಮೂಲದ ತಜ್ಞ ಅಶ್ವತ್ಥ್ ದಾಮೋದರನ್ ಅವರು ಕಂಪನಿಯ ಪ್ರತಿ ಷೇರಿನ ಬೆಲೆಯು ₹ 2,950 ಆಗಬಹುದು ಎಂದು ಅಂದಾಜು ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.