ADVERTISEMENT

ಪೇಟಿಎಂ ಮಾಲ್‌ನಲ್ಲಿ ಕಾರ್‌ ಬುಕಿಂಗ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:45 IST
Last Updated 2 ಮೇ 2019, 19:45 IST

ಬೆಂಗಳೂರು: ಪೇಟಿಎಂ ಮಾಲ್‌ನಲ್ಲಿ ರೆನೊ ಕಂಪನಿಯ ಕಾರುಗಳನ್ನು ಖರೀದಿಸುವ ಸೌಲಭ್ಯಕ್ಕೆ ಚಾಲನೆ ದೊರೆತಿದೆ.

ಇದಕ್ಕಾಗಿ ಪೇಟಿಎಂ ಮಾಲ್, ರೆನೊ ಕಂಪನಿ ಜೊತೆ ಸಹಭಾಗಿತ್ವ ಹೊಂದಿದೆ. ಪೇಟಿಎಂ ಮಾಲ್‌ನಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಿದ ಮೊದಲ ಸಂಸ್ಥೆ ರೇನೊ ಆಗಿದೆ. ‘ಅಂತರ್ಜಾಲ ತಾಣ ಅಥವಾ ಮೊಬೈಲ್ ಆ್ಯಪ್ ಮೂಲಕ ₹ 10 ಸಾವಿರ ಮುಂಗಡ ಪಾವತಿಸಿ ಕಾರ್‌ ಬುಕಿಂಗ್ ಮಾಡಬಹುದು. ಸಮೀಪದ ಡೀಲರ್ ಬಳಿ‌ ಬಾಕಿ ಹಣ ಪಾವತಿಸಿ ಕಾರ್‌ ಖರೀದಿಸಬಹುದು’ ಎಂದು ಪೇಟಿಎಂ ಮಾಲ್‌ನ ಹಿರಿಯ ಉಪಾಧ್ಯಕ್ಷ ಶ್ರೀನಿವಾಸ್ ಮೊಥೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT