ADVERTISEMENT

ಪೇಟಿಎಂ ಮನಿಗೆ ‘ಸೆಬಿ’ ಅನುಮತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 18:58 IST
Last Updated 3 ಏಪ್ರಿಲ್ 2019, 18:58 IST

ಬೆಂಗಳೂರು: ಮ್ಯೂಚುವಲ್ ಫಂಡ್ ಹೂಡಿಕೆಗೆ ಅತಿದೊಡ್ಡ ವೇದಿಕೆಯಾಗಿರುವ ‘ಪೇಟಿಎಂ ಮನಿ’, ಷೇರು ವಹಿವಾಟು ಆರಂಭಿಸಲು ಭಾರತದ ಷೇರು ನಿಯಂತ್ರಣ ಮಂಡಳಿ (ಸೆಬಿ) ಅನುಮತಿ ನೀಡಿದೆ.

ಮುಂಬೈ ಷೇರುಪೇಟೆ (ಬಿಎಸ್‍ಇ) ಹಾಗೂ ರಾಷ್ಟ್ರೀಯ ಷೇರುಪೇಟೆಗಳಿಂದ (ಎನ್‍ಎಸ್‍ಇ) ಪೇಟಿಎಂ ಮನಿಯ ಸದಸ್ಯತ್ವಕ್ಕಾಗಿ ಅನುಮೋದನೆಯೂ ದೊರೆತಿದೆ. ಆ್ಯಪ್ ಮೂಲಕ ಹಣ ಹೂಡಿಕೆ, ಷೇರು, ಉತ್ಪನ್ನ, ಕರೆನ್ಸಿ, ಸರಕು, ಷೇರುಪೇಟೆಯ ಹೂಡಿಕೆ ನಿಧಿಗಳು (ಇಟಿಎಫ್) ಹಾಗೂ ಇತರ ಉತ್ಪನ್ನಗಳಲ್ಲಿ ವಹಿವಾಟು ನಡೆಸಲು ಸಂಸ್ಥೆ ಉದ್ದೇಶಿಸಿದೆ.

‘ಪೇಟಿಎಂ ಮನಿಯು ಪೂರ್ಣ ಪ್ರಮಾಣದ ಷೇರು ಸಂಪತ್ತಿನ ನಿರ್ವಹಣಾ ವೇದಿಕೆಯಾಗಿ ರೂಪುಗೊಳ್ಳುವ ಕಡೆಗೆ ಹೆಜ್ಜೆ ಇಟ್ಟಿದೆ. ಹೂಡಿಕೆ ಸುಲಭಗೊಳಿಸಿ ಸಂಪತ್ತು ಗಳಿಕೆ ಅವಕಾಶ ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಸೇವೆ ಆರಂಭವಾಗಲಿದೆ’ ಎಂದು ಪೇಟಿಎಂ ಮನಿಯ ನಿರ್ದೇಶಕ ಪ್ರವೀಣ್ ಜಾಧವ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.