ನವದೆಹಲಿ: ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳನ್ನು ನೀಡುವ ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯುನಿಕೇಷನ್ಸ್ನ ನಷ್ಟವು ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹ 778.5 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಷ್ಟವು ₹ 535.5 ಕೋಟಿಗಳಷ್ಟು ಇತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ಕಾರ್ಯಾಚರಣಾ ವರಮಾನವು ₹ 772 ಕೋಟಿಗಳಿಂದ ₹ 1,456 ಕೋಟಿಗೆ ಏರಿಕೆ ಆಗಿದೆ. ಪೇಟಿಎಂನ ಪಾವತಿ ಸೇವೆಗಳು ಶೇ 60ರಷ್ಟು ಬೆಳವಣಿಗೆ ಕಂಡಿದ್ದು ₹ 254 ಕೋಟಿಗಳಿಂದ ₹ 406 ಕೋಟಿಗಳಿಗೆ ಏರಿಕೆ ಆಗಿದೆ ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.