ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬುಧವಾರ ಮತ್ತೆ ಪ್ರತಿ ಲೀಟರ್ಗೆ 35 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಇಂಧನ ದರ ಈವರೆಗಿನ ಗರಿಷ್ಠಮಟ್ಟ ತಲುಪಿದೆ.
ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹107.94 ಆಗಿದ್ದು, ಡೀಸೆಲ್ ದರ ₹96.67ಕ್ಕೆ ತಲುಪಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ₹113.80 ಹಾಗೂ ಡೀಸೆಲ್ ಬೆಲೆ ₹104.75 ಆಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹111.70 ಆಗಿದ್ದು, ಡೀಸೆಲ್ ದರ ₹102.60 ಆಗಿದೆ.
ಕೋಲ್ಕತ್ತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹108.45 ಹಾಗೂ ಡೀಸೆಲ್ ದರ ₹99.78 ಆಗಿದೆ.
ಚೆನ್ನೈಯಲ್ಲಿ ಪೆಟ್ರೋಲ್ ಬೆಲೆ ₹104.83 ಮತ್ತು ಡೀಸೆಲ್ ಬೆಲೆ ₹100.92 ಆಗಿದೆ.
ಈ ಹಿಂದೆ ಅಕ್ಟೋಬರ್ 24ರಂದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.